Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಸೋಮವಾರ, 24 ಡಿಸೆಂಬರ್ 2018 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಮಕ್ಕಳ ಭವಿಷ್ಯದ ಬಗ್ಗೆ ಹೊಸ ಯೋಜನೆಯೊಂದನ್ನು ರೂಪಿಸುವಿರಿ. ವೃತ್ತಿ ರಂಗದಲ್ಲಿ ಕೊಂಚ ಅಡೆತಡೆಯುಂಟಾದೀತು. ಆದರೆ ದಿನದಂತ್ಯಕ್ಕೆ ಶುಭ ಸುದ್ದಿಯಿದೆ.

ವೃಷಭ: ಅನಿರೀಕ್ಷಿತವಾಗಿ ಬಂಧುಮಿತ್ರರ ಆಗಮನದಿಂದ ಶುಭ ಸಮಾಚಾರ ಕೇಳುವಿರಿ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.

ಮಿಥುನ: ಕುಟುಂಬದವರೊಂದಿಗೆ ವೈಮನಸ್ಯಕ್ಕೆ ಎಡೆಮಾಡಿ ಕೊಡದಿರಿ.ವೃತ್ತಿ ರಂಗದಲ್ಲಿ ಅಪವಾದದ ಭೀತಿ ಇದೆ. ದೇವರ ಪ್ರಾರ್ಥನೆಯಿಂದ ಎಲ್ಲವೂ ಮಂಗಲವಾಗಲಿದೆ.

ಕರ್ಕಟಕ: ಧನಾಗಮನವಾಗಿ ಆರ್ಥಿಕ ಪರಿಸ್ಥಿತಿಗಳು ಸುಧಾರಿಸಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಇಂದು ಲಾಭ.

ಸಿಂಹ: ಬೇಡದ ಕೆಲಸಗಳ ಬಗ್ಗೆ ಆಲೋಚನೆ ಮಾಡುವಿರಿ. ಮನೆಯವರಿಂದ ಸಹಕಾರ ಸಿಕ್ಕಿ ಅಂದುಕೊಂಡ ಕೆಲಸಗಳು ನೆರವೇರುವುದು. ಕಾರ್ಯದೊತ್ತಡವಿದ್ದರೂ ಆಲಸ್ಯ ಮಾಡುವುದು ಬೇಡ.

ಕನ್ಯಾ: ನೀವು ಅಂದುಕೊಂಡ ಕೆಲಸಗಳು ನೆರವೇರಲಿವೆ. ಹಿತಶತ್ರುಗಳಿಂದ ವಂಚನೆಗೊಳಗಾಗುವ ಭಯ ಕಾಡುವುದು. ಆದರೆ ಆರ್ಥಿಕವಾಗಿ ಸ್ಥಿತಿ ಗತಿ ಸುಧಾರಿಸಲಿದೆ.

ತುಲಾ: ಕೌಟುಂಬಿಕ ಕೆಲಸಗಳಲ್ಲಿ ಭಾಗವಹಿಸಿ ಯಶಸ್ಸು ಕಾಣುವಿರಿ. ಮನೆಯಲ್ಲಿ ಸಂತಸದ ವಾತಾವರಣವಿರಬಹುದು. ಎಷ್ಟೋ ದಿನಗಳ ಸಮಸ್ಯೆಗೆ ಪರಿಹಾರ ಸಿಗುವುದು.

ವೃಶ್ಚಿಕ: ಧನಾಗಮನವಿದ್ದರೂ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಬಂಧು ಮಿತ್ರರ ಆಗಮನದಿಂದ ಸಂತಸವಾಗಲಿದೆ. ದೂರ ಸಂಚಾರ ಕೈಗೊಳ್ಳುವಿರಿ, ಆದರೆ ಎಚ್ಚರ ಅಗತ್ಯ.

ಧನು: ಉದ್ಯೋಗದಲ್ಲಿ ಬಡ್ತಿ ಸಿಕ್ಕಿ ಆರ್ಥಿಕವಾಗಿ ಸುಧಾರಣೆ ಕಂಡು ಮನೆಯಲ್ಲಿ ಸಂತಸದ ವಾತಾವರಣವಿರುವುದು. ಹೊಸ ವಸ್ತುಗಳ ಖರೀದಿ ಮಾಡುವಿರಿ. ದೇವತಾ ಆರಾಧನೆ ಮಾಡಿ.

ಮಕರ: ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಬಹುದು. ಧನಾಗಮನವಾದಷ್ಟೇ ಖರ್ಚುಗಳೂ ಕಂಡಬರುವುದು. ವಾದ ವಿವಾದಗಳಿಂದ ಆದಷ್ಟು ದೂರವಿರಿ.

ಕುಂಭ: ಇಂದು ಹೊಸ ಕೆಲಸಗಳು, ಸಂಬಂಧಗಳಿಗೆ ಕೈ ಹಾಕದೇ ಇರುವುದೇ ಒಳ್ಳೆಯದು. ಅನವಶ್ಯಕವಾಗಿ ನಿಮ್ಮದಲ್ಲದ ತಪ್ಪಿನಿಂದ ಅಪವಾದಕ್ಕೆ ಗುರಿಯಾಗುವ ಸಂಭವವಿದೆ. ಹೀಗಾಗಿ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸಿ.

ಮೀನ: ಸಂಗಾತಿಯೊಡನೆ ಭಿನ್ನಾಭಿಪ್ರಾಯ ಮೂಡಲಿದೆ. ಇದರಿಂದ ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ದೇವತಾ ಆರಾಧನೆ ಕೈಗೊಳ್ಳುವುದು ಸೂಕ್ತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.              

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments