ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಹಿತ ಶತ್ರುಗಳಿಂದ ಎಚ್ಚರವಾಗಿರಿ. ದೇವತಾ ಕಾರ್ಯಗಳಿಗೆ ಧನವಿನಿಯೋಗಿಸುವಿರಿ. ಆರೋಗ್ಯದ ಬಗ್ಗೆ ಎಚ್ಚರವಾಗಿರಿ.ವೃಷಭ: ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಪರಿಹಾರವಾಗಲಿದೆ. ಕಾರ್ಯದೊತ್ತಡದಿಂದ ಆಯಾಸಗೊಳ್ಳುವಿರಿ. ಆದರೆ ಕುಟುಂಬ ವರ್ಗದವರ ಸಹಕಾರದಿಂದ ನೆಮ್ಮದಿ.ಮಿಥುನ: ಅನಿವಾರ್ಯವಾಗಿ ಖರ್ಚು ವೆಚ್ಚಗಳನ್ನು ಮಾಡಬೇಕಾಗಬಹುದು. ದೂರ ಸಂಚಾರ ಮಾಡಬೇಕಾಗಿ ಬರುತ್ತದೆ. ಕಚೇರಿಯಲ್ಲಿ ಒತ್ತಡದ ವಾತಾವರಣವಿರುತ್ತದೆ.ಕರ್ಕಟಕ: ತಾಳ್ಮೆ ಸಮಾಧಾನವಿದ್ದರೆ ಇಂದಿನ ದಿನ ಶುಭದಿನವಾಗುತ್ತದೆ. ಕುಟುಂಬ ವರ್ಗದವರೊಂದಿಗೆ ಎಲ್ಲಾ ವಿಚಾರಕ್ಕೂ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ದಿನದಂತ್ಯಕ್ಕೆ ಶುಭ ಸುದ್ದಿ.ಸಿಂಹ: ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವುದು. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಾಗೆಯೇ ಖರ್ಚು ವೆಚ್ಚಗಳೂ ಅಧಿಕವಾಗುವುದು.ಕನ್ಯಾ: ವೃತ್ತಿ ರಂಗದಲ್ಲಿ ಯಶಸ್ಸು ಗಳಿಸುತ್ತೀರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುತ್ತದೆ. ಆದರೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಎಚ್ಚರದಿಂದ ವ್ಯವಹರಿಸಿ.ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವ್ಯವಹಾರಗಳಲ್ಲಿ ಕಾರ್ಯ ಸಿದ್ಧಿಯಾಗುತ್ತದೆ. ಗಣಪತಿಯನ್ನು ಪ್ರಾರ್ಥನೆ ಮಾಡುವುದರಿಂದ ಅಂದುಕೊಂಡ ಕೆಲಸಗಳು ನೆರವೇರಿ ಯಶಸ್ಸು ಲಭಿಸುತ್ತದೆ.ವೃಶ್ಚಿಕ: ಇಂದು ನಿಮ್ಮ ಆರ್ಥಿಕ ಸ್ಥಿತಿಗತಿ ಸಮಸ್ಥಿತಿಯಲ್ಲಿರುವುದು. ವ್ಯವಹಾರಗಳಲ್ಲಿ ಕೊಂಚ ಹಿನ್ನಡೆಯಾದೀತು. ಆದರೆ ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಲಭಿಸುವುದು.ಧನು: ಕಾರ್ಯಕ್ಷೇತ್ರದಲ್ಲಿ ಒತ್ತಡದ ಅನುಭವವಾಗುವುದು. ಅನಿರೀಕ್ಷಿತ ಅತಿಥಿಗಳು ಆಗಮಿಸುವರು. ಮಾನಸಿಕವಾಗಿ ಕೊಂಚ ಕಿರಿ ಕಿರಿ ಅನುಭವಿಸುತ್ತೀರಿ.ಮಕರ: ಕುಟುಂಬದಲ್ಲಿ ಸಹಕಾರ ಸಿಕ್ಕಿ ಕೈಗೊಂಡ ಕೆಲಸಗಳು ಯಶಸ್ವಿಯಾಗುವುದು. ಇದರಿಂದ ಸಂತಸದ ವಾತಾವರಣ ನೆಲೆ ನಿಲ್ಲಲಿದೆ. ಆದರೆ ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.ಕುಂಭ: ಆಪ್ತರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ಬಾಯ್ತಪ್ಪಿ ಆಡುವ ಮಾತುಗಳು ಇಂದು ಸಂಬಂಧಕ್ಕೆ ಕುತ್ತು ತರಬಹುದು. ದೇವರ ದರ್ಶನ ಪಡೆದರೆ ನೆಮ್ಮದಿ ಸಿಗುವುದು.ಮೀನ: ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಸಹಕಾರ ದೊರಕಿ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಆದರೆ ಕುಟುಂಬದಲ್ಲಿ ಕೊಂಚ ಕಿರಿ ಕಿರಿ ಇದ್ದೀತು. ಆದರೆ ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ.ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.