Publish Date: Sat, 17 Oct 2020 (09:10 IST)
Updated Date: Sat, 17 Oct 2020 (09:12 IST)
ಬೆಂಗಳೂರು: ಎಲ್ಲರ ಮನೆಯಲ್ಲಿ ವಾಲ್ ಕ್ಲಾಕ್ ಅಥವಾ ಗಡಿಯಾರ ಇದ್ದೇ ಇರುತ್ತದೆ. ಆದರೆ ಯಾವ ದಿಕ್ಕಿನಲ್ಲಿ ಗಡಿಯಾರವಿದ್ದರೆ ವಾಸ್ತು ಪ್ರಕಾರ ಉತ್ತಮ ಗೊತ್ತಾ?
ಗಡಿಯಾರಕ್ಕೂ ವಾಸ್ತುವಿಗೂ ಎಂಥಾ ಸಂಬಂಧ ಎನ್ನಬೇಡಿ. ಗಡಿಯಾರ ನಮ್ಮ ಸಮಯ ಸೂಚಿಸುವ ಯಂತ್ರ. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಶುಭ ಮತ್ತು ಲಾಭವಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಗಡಿಯಾರವಿರಿಸಿದರೆ ಮನೆಯ ಸದಸ್ಯರ ನಡುವೆ ಅವಕಾಶವಾದಿತನ ಹೆಚ್ಚುತ್ತದೆ. ಇನ್ನು, ಉತ್ತರ ದಿಕ್ಕಿನಲ್ಲಿ ಗಡಿಯಾರವಿಟ್ಟರೆ ಮನೆಯಲ್ಲಿ ಸಂಪತ್ತು ನಷ್ಟವಾಗುವ ಅಪಾಯವಿದೆ.