Publish Date: Mon, 27 Nov 2017 (08:58 IST)
Updated Date: Mon, 27 Nov 2017 (09:03 IST)
ಬೆಂಗಳೂರು: ಹುಟ್ಟಿದ ತಿಂಗಳು ನಮ್ಮ ಸ್ವಭಾವ ನಿರ್ಧರಿಸುತ್ತೆ ಎಂದರೆ ನೀವು ನಂಬಲೇ ಬೇಕು. ಇಂದಿನಿಂದ ಪ್ರತಿ ನಿತ್ಯ ಒಂದೊಂದು ತಿಂಗಳಲ್ಲಿ ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಎಂದು ನೋಡುತ್ತಾ ಹೋಗೋಣ.
ಜನವರಿಯಲ್ಲಿ ಹುಟ್ಟಿದ್ದರೆ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮಲ್ಲಿ ಒಳ್ಳೆ ಲೀಡರ್ ಶಿಪ್ ಗುಣವಿರುತ್ತದೆ. ಆದರೆ ಯಾರ ಮಾತೂ ಕೇಳದೆ ನಿಮ್ಮದೇ ನಿರ್ಧಾರ ತೆಗೆದುಕೊಳ್ಳುವ ಹಠಮಾರಿ. ಆದರೆ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೀರಿ.
ನಿಮ್ಮದು ನೇರ ಸ್ವಭಾವವಾಗಿರುತ್ತದೆ. ಮುಖಕ್ಕೆ ಹೊಡೆದಾಂಗೆ ಹೇಳುವ ನಿಮ್ಮ ಸ್ವಭಾವ ನಿಮಗೆ ಪ್ಲಸ್ ಮತ್ತು ಮೈನಸ್ ಪಾಯಿಂಟ್ ಆಗಿರುತ್ತದೆ. ಆದರೆ ಹೆಣ್ಣು ಮಕ್ಕಳು ನಿಮ್ಮ ಸಹಾಯಕ್ಕೆ ಬರಲ್ಲ. ಇನ್ನು, ದುಡ್ಡು ಕಾಸಿನ ವಿಚಾರದಲ್ಲಿ ಬಹಳ ಹುಷಾರಾಗಿರುತ್ತೀರಿ. ಏನಾದ್ರೂ ಸಾಧಿಸಬೇಕು, ಕಲಿಯಬೇಕು ಎಂಬ ಹಂಬಲ ಸದಾ ನಿಮಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ