ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರ ಉಪಯೋಗವೇನು ಗೊತ್ತಾ?

ಬುಧವಾರ, 6 ಮೇ 2020 (08:43 IST)
ಬೆಂಗಳೂರು: ಆಯುರ್ವೇದದ ಪ್ರಕಾರ ಬೆಳಿಗ್ಗಿನ ಜಾವ 3.00 ರಿಂದ 6.00 ರವರೆಗಿನ ಮುಹೂರ್ತವನ್ನು ಬ್ರಾಹ್ಮಿ ಮುಹೂರ್ತ ಎನ್ನಲಾಗುತ್ತದೆ. ಈ ಸಮಯದಲ್ಲಿ ಎದ್ದೇಳುವುದರಿಂದ ಆಗುವ ಉಪಯೋಗಗಳೇನು ಗೊತ್ತಾ?


ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರಬದ್ಧವಾಗಿ ನಿಷಿದ್ಧ.

ವೈಜ್ಞಾನಿಕವಾಗಿಯೂ ಈ ಸಮಯದಲ್ಲಿ ವಾಯುಮಂಡಲ ವಿಷ ಮುಕ್ತವಾಗಿರುವುದರಿಂದ ಈ ಸಮಯದಲ್ಲಿ ಗಾಳಿ ಸೇವನೆ ಮಾಡುವುದು ಶ್ವಾಸಕೋಶಕ್ಕೆ ಉತ್ತಮ. ಈ ಮುಹೂರ್ತದಲ್ಲಿ ಎದ್ದೇಳುವವರ ಶರೀರದಲ್ಲಿ ಸಂಜೀವಿನಿ ಸಂಚಾರ ಮಾಡುತ್ತದೆ. ಈ ಸಮಯದಲ್ಲಿ ಅಧ್ಯಯನ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ರಾಮಾಯಣದಲ್ಲಿ ಸೀತೆಯನ್ನು ಹುಡುಕುತ್ತಾ ಆಂಜನೇಯ ಬ್ರಾಹ್ಮಿ ಮುಹೂರ್ತಕ್ಕೇ ಲಂಕೆ ತಲುಪಿದ ಎನ್ನಲಾಗುತ್ತದೆ. ಈ ಸಮಯದಲ್ಲಿ ಆಲಸ್ಯ ಬಿಟ್ಟು ಎದ್ದು ಕೆಲಸ ಮಾಡುವುದರಿಂದ ಶ್ರೇಯಸ್ಸು ಸಿಗುವುದು ಎಂಬ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ