Select Your Language

Notifications

webdunia
webdunia
webdunia
webdunia

ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ 8 ಪರಿಹಾರೋಪಾಯಗಳು

ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿಗೆ 8 ಪರಿಹಾರೋಪಾಯಗಳು
ಬೆಂಗಳೂರು , ಶುಕ್ರವಾರ, 24 ಜೂನ್ 2016 (13:14 IST)
ದುರ್ಬಲ ಶುಕ್ರ ಮತ್ತು ಗುರುವಿನಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸದಂತೆ ಪರಿಹಾರೋಪಾಯಗಳಿದ್ದು, ಅನೇಕ ಪರಿಹಾರಗಳನ್ನು ಒಮ್ಮೆಗೇ ಮಾಡಬೇಡಿ. ಒಂದು ಪರಿಹಾರವನ್ನು ಕನಿಷ್ಟ 27 ದಿನಗಳ ಕಾಲ ಮಾಡಬೇಕಾಗುತ್ತದೆ.
 
1.  ಪತ್ನಿಯು ಪತಿಯ ಎಡಭಾಗದಲ್ಲಿ ಮಲಗಬೇಕು. ನೀವು ಒಂದು ತಲೆದಿಂಬನ್ನು ಮಾತ್ರ ಉಪಯೋಗಿಸಬೇಕು. ವಿವಿಧ ತಲೆದಿಂಬುಗಳನ್ನು ಬಳಸಬೇಡಿ.
2. ಮಲಗುವ ಕೋಣೆಯ ಬಣ್ಣ ತಿಳಿ ನಸುಗೆಂಪು ಅಥವಾ ತಿಳಿ ಹಸಿರು. ದಟ್ಟವಾದ ಬಣ್ಣಗಳನ್ನು ಬಳಸಬೇಡಿ, ಹಳದಿ ಅಥವಾ ಅದೇ ರೀತಿಯ ಬಣ್ಣಗಳನ್ನು ಬಳಸಬೇಡಿ
 
3. ಪತಿ-ಪತ್ನಿ ಶುಕ್ರವಾರ ಹೂಗಳನ್ನು ಖರೀದಿಸಬೇಕು. ನೀವು ಒಂದು ಗುಲಾಬಿ ಅಥವಾ ಬಿಳಿಯ ಹೂವುಗಳನ್ನು ಖರೀದಿಸಬೇಕು. ಇತರೆ ಹೂವುಗಳನ್ನು ಖರೀದಿಸಬೇಡಿ. ಹೂವುಗಳನ್ನು ಮಲಗುವ ಕೋಣೆಯಲ್ಲಿ ಇರಿಸಿ.
4. ಮಲಗುವಾಗ ತಲೆಯನ್ನು ದಕ್ಷಿಣ ಅಥವಾ ಪೂರ್ವ ದಿಕ್ಕಿಗೆ ಇರಿಸಿ. ವಿರುದ್ಧ ದಿಕ್ಕಿನಲ್ಲಿ ಹರಿಯುವ ನೀರಿನ ಚಿತ್ರವನ್ನು ಇರಿಸಿ. ಮಲಗುವ ಕೋಣೆಯಲ್ಲಿ ದೇವರ ಚಿತ್ರವನ್ನು ತೂಗುಹಾಕಬೇಡಿ.
 
5. ಶುಕ್ರವಾರ ಹಗುರ ಸುವಾಸನೆಯ ಸುಗಂಧ ಬಳಸಿ. ಪತಿ- ಪತ್ನಿ ಇಬ್ಬರೂ ಅದನ್ನು ಬಳಸಬೇಕು.
6.ಬಿಳಿಯ ಸಿಹಿಯನ್ನು ದೇವತೆಗೆ ಅರ್ಪಿಸಿ. ಬಳಿಕ ಇಬ್ಬರೂ ಅದನ್ನು ಸೇವಿಸಬೇಕು.
7. ತಂದೆಯ ಮನೆಯಿಂದ ತಂದ ಹಾಸಿಗೆಯನ್ನು ಬಳಸಬೇಕು. ನಾಲ್ಕು ಬದಿಗಳಲ್ಲಿ ನಸುಗೆಂಪು ದಾರಗಳನ್ನು ಕಟ್ಟಿ.
 
8. ನೂತನ ದಂಪತಿ ವಜ್ರವನ್ನು ಧರಿಸಬೇಕು. ವೈವಾಹಿಕ ಜೀವನದಲ್ಲಿ ಸಮಸ್ಯೆ ಉದ್ಭವವಾದರೆ ಅದನ್ನು ತೆಗೆಯಿರಿ. ಪತ್ನಿಯು ಚಿನ್ನದ ಉಂಗುರವನ್ನು ಮತ್ತು ಪತಿಯು ಬೆಳ್ಳಿಯ ಉಂಗುರವನ್ನು ಯಾವುದಾದರೂ ಬೆರಳಲ್ಲಿ ಧರಿಸಬೇಕು.
ಹೆಚ್ಚುವರಿ ಪರಿಹಾರ: ಶುಕ್ರವಾರ ಜ್ಯೋತಿಷ್ಯದಲ್ಲಿ ಶುಭ ದಿನವಾಗಿದ್ದು, ಆ ದಿನ ಹೊಸ ಬಟ್ಟೆಗಳು ಮತ್ತು ಆಭರಣಗಳನ್ನು ಖರೀದಿಸಿದರೆ ಅವು ನಿಮಗೆ ಉಡುಗೊರೆಯಾಗಿ ಮುಂದೆ ಸಿಗಬಹುದು.

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅದೃಷ್ಟ ಖುಲಾಯಿಸಲು ಕೆಲವು ಟಿಪ್ಸ್‌ಗಳು