ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರಲು 5 ಸೋಮವಾರ ಈ ರೀತಿಯಲ್ಲಿ ಪೂಜೆ ಮಾಡಿ

Webdunia
ಬುಧವಾರ, 9 ಜನವರಿ 2019 (08:15 IST)
ಬೆಂಗಳೂರು : ನಮ್ಮ ಜಾತಕದಲ್ಲಿ ಗ್ರಹ ಸ್ಥಿತಿಗಳು ಸರಿಯಾಗಿ ಇಲ್ಲದೆ ಇದ್ದರೆ ಆರ್ಥಿಕ ಕಷ್ಟಗಳು , ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತದೆ.  5 ಸೋಮವಾರ ಈ ರೀತಿ ಪರಿಹಾರವನ್ನು ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.


ಜಾತಕದಲ್ಲಿ ಚಂದ್ರನ ಅನುಗ್ರಹವಿದ್ದರೆ ಎಲ್ಲಾ ವಿಷಯಗಳಲ್ಲಿ ಯಶಸ್ಸು ಕಾಣಬಹುದು. ಈ ಚಂದ್ರನ ಅನುಗ್ರಹ ಪಡೆಯಲು ಶಿವರಾಧನೆ ಮಾಡಬೇಕು. ಸೋಮವಾರ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನವನ್ನಾಚರಿಸಿ ನಿತ್ಯ ಪೂಜೆಯನ್ನು ಮಾಡಿದ ನಂತರ ಶಿವಪೂಜೆ ಮಾಡಬೇಕು.


 ಇದಕ್ಕಾಗಿ ಒಂದು ಮಣೆಯ ಮೇಲೆ 8 ಕಮಲದ ಹೂವು ಅಥವಾ 8 ದಳಗಳಿರುವ ಹೂಗಳನ್ನು ಇಡಬೇಕು. ನಂತರ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನು ಹಾಸಬೇಕು. ಅದರ ಮೇಲೆ ಅರ್ಧ ಕೆಜಿ ಅಕ್ಕಿಯನ್ನು ಹಾಕಿ ಆ ಅಕ್ಕಿಯ ಮೇಲೆ ಓಂ ಚಿತ್ರ ಬಿಡಿಸಿ ಶಿವಲಿಂಗ ಇಡಬೇಕು. ಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ ಮನಸ್ಸಿನ ಇಷ್ಟಾರ್ಥಗಳನ್ನು ಸಂಕಲ್ಪ ಮಾಡಿಕೊಳ್ಳಬೇಕು. ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿ ಆರತಿ ಬೆಳಗಬೇಕು. ಈ ಪೂಜೆ ಮುಗಿದ ಬಳಿಕ ಬಡವರಿಗೆ ಆ ಅಕ್ಕಿಯನ್ನು ದಾನ ಮಾಡಬೇಕು. ಹೀಗೆ 5 ಸೋಮವಾರ ಇದೇ ರೀತಿಯಲ್ಲಿ ಪೂಜೆ ಮಾಡಿ ದಾನ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ತುಂಬಿರುತ್ತದೆ.   


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments