ಶ್ರಾದ್ಧ ಅಥವಾ ಪುಣ್ಯ ತಿಥಿ ದಿನ ಅನ್ನದಾನ ಮಾಡುವುದನ್ನು ನೋಡುತ್ತೇವೆ. ಆದರೆ ಪುಣ್ಯ ತಿಥಿಯಂದು ಅನ್ನದಾನ ಮಾಡುವುದು ಯಾಕೆ? ವೇ.ಮೂ. ವೆಂಕಟ್ರಮಣ ಭಟ್ ಅವರು ಈ ರೀತಿ ವಿವರಿಸಿದ್ದಾರೆ ನೋಡಿ.
ಶ್ರದ್ಧೆಯಿಂದ ಮಾಡುವ ಕಾರ್ಯವೇ ಶ್ರಾದ್ಧ ಎಂದು ಕರೆಯಲಾಗುತ್ತದೆ. ಎಲ್ಲಾ ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದುದು. ಅನ್ನದಾನವನ್ನು ಮಾಡುವುದರಿಂದ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗುತ್ತೇವೆ. ನಾವು ಯಾವ ದೇವ ಕಾರ್ಯಗಳನ್ನು ಮಾಡುತ್ತೇವೋ ಬಿಡುತ್ತೇವೋ ಆದರೆ ಪಿತೃ ಕಾರ್ಯವನ್ನು ಮಾತ್ರ ತಪ್ಪದೇ ಮಾಡಬೇಕು.
ನಮ್ಮ ಮಾತ್ರವಲ್ಲ, ಕುಟುಂಬದ ಶ್ರೇಯೋಭಿವೃದ್ಧಿಯಾಗಬೇಕೆಂದರೆ ಪಿತೃಕಾರ್ಯವನ್ನು ತಪ್ಪದೇ ಮಾಡಲೇಬೇಕು. ಹಿರಿಯರಿಗೆ ನಾವು ನೀಡುವ ಪಿಂಡ ಯಾವುದಾದರೂ ಒಂದು ರೂಪದಲ್ಲಿ ಅವರನ್ನು ಸೇರುತ್ತದೆ ಎಂಬ ನಂಬಿಕೆ.
ಶ್ರಾದ್ಧದ ದಿನ ವಿಶೇಷವಾಗಿ ಬ್ರಾಹ್ಮಣರಿಗೆ ಭೋಜನ ನೀಡುವುದರ ಮೂಲಕ ಪಿತೃಗಳಿಗೆ ಅನ್ನವು ಸಲ್ಲುತ್ತದೆ. ಅದೇ ರೀತಿ ಬಂಧು, ಮಿತ್ರರಿಗೂ ಊಟ ಬಡಿಸಿಯೇ ತಾವು ಊಟ ಮಾಡಬೇಕು ಎಂಬುದು ಶಾಸ್ತ್ರವಾಗಿದೆ. ಕೇವಲ ಮನುಷ್ಯರು ಮಾತ್ರವಲ್ಲ, ಜಲಚರಗಳಿಗೆ, ಪಕ್ಷಿಗಳಿಗೆ ಅನ್ನ ನೀಡುವ ಮೂಲಕ ಯಾವುದೇ ರೂಪದಲ್ಲಾದರೂ ಪಿತೃಗಳಿಗೆ ಅನ್ನ ಸಲ್ಲುವಂತೆ ಮಾಡುತ್ತೇವೆ. ಅದಕ್ಕಾಗಿಯೇ ಬಲಿ ಬಾಳೆಯನ್ನು ಪಕ್ಷಿಗಳಿಗೂ, ಪಿಂಡವನ್ನು ನೀರಿನಲ್ಲಿರುವ ಪ್ರಾಣಿಗಳಿಗೂ, ಅನ್ನವನ್ನು ಬ್ರಾಹ್ಮಣರಿಗೆ ಮತ್ತು ಬಂಧುಮಿತ್ರರಿಗೆ ಹಂಚಿ ನಾವು ಊಟ ಮಾಡಬೇಕು.
https://kannada.webdunia.com/article/astro-news/why-we-need-to-do-annadanam-on-shraddha-126012900002_1.html