Select Your Language

Notifications

webdunia
webdunia
webdunia
webdunia

ಭಸ್ಮವನ್ನು ಯಾಕೆ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು? ಎಂಬುದು ತಿಳಿಬೇಕಾ...

ಭಸ್ಮವನ್ನು ಯಾಕೆ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು? ಎಂಬುದು ತಿಳಿಬೇಕಾ...
ಬೆಂಗಳೂರು , ಸೋಮವಾರ, 11 ಜೂನ್ 2018 (12:50 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಕೆಲವರು ಭಸ್ಮವನ್ನು ದೇವರ ಪ್ರಸಾದವೆಂದು  ಹಣೆಗೆ ಹಚ್ಚಿಕೊಳ್ಳುತ್ತಾರೆ. ಕೆಲವರು ಅದನ್ನು ಕೈಕಾಲು ಮೈಗೂ ಕೂಡ ಹಚ್ಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇದನ್ನು ಯಾಕೆ ಹಚ್ಚಿಕೊಳ್ಳಬೇಕು?  ಹೇಗೆ ಹಚ್ಚಿಕೊಳ್ಳಬೇಕು? ಎಂಬ ವಿವರ ಇಲ್ಲಿದೆ ನೋಡಿ.

ನಮ್ಮ ಶಾಸ್ತ್ರದಲ್ಲಿ ಆಕಳಿನ ಸಗಣಿಯನ್ನು ಮಂತ್ರ ಪುರಸ್ಸರವಾಗಿ ಸುಡಬೇಕು. ಹೀಗೆ ತಯಾರಾದ ಭಸ್ಮಕ್ಕೆ ವಿಭೂತಿ ಎನ್ನುತ್ತಾರೆ. ಈ ವಿಭೂತಿಗೆ ಭಸಿತ ಅಥವಾ ರಕ್ಷಾ ಎಂತಲೂ ಕರೆಯುತ್ತಾರೆ. ಭ ಎಂದರೆ ಪಾಪಗಳ ಭರ್ತನ ಮತ್ತು ಸ್ಮ ಎಂದರೆ ಈಶ್ವರನ ಸ್ಮರಣೆ. ಹಾಗಾಗಿ ಭಸ್ಮ ಧಾರಣೆಯನ್ನು ಮಾಡುವಾಗ ಈಶ್ವರನ ಸ್ಮರಣೆಯನ್ನು ಮಾಡಬೇಕು. ಅಂದರೆ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದರಿಂದ ಒಳ್ಳಯದಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.

 

ವಿಭೂತಿ ಧಾರಣೆಯನ್ನು ಬಲಗೈಯಲ್ಲಿ ಇರುವ ಮಧ್ಯದ ಮೂರು ಬೆರಳುಗಳಿಂದ ಹಣೆಗೆ ಹಾಗೂ ಇನ್ನಿತರ ದೇಹದ ಭಾಗಗಳಿಗೆ ಹಚ್ಚಿಕೊಳ್ಳಬೇಕು. ತ್ರಿಪುಂಡ್ರವೆಂದರೆ ಮೂರು ಎಂದರ್ಥ. ಅದು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಸೂಚಿಸುತ್ತದೆ. ನಮ್ಮ ಜೀವನದ ಸುರಕ್ಷತೆಗೆ ಜ್ಞಾನ,ಭಕ್ತಿ, ವೈರಾಗ್ಯ ಬೇಕೆನ್ನುವ ಸಂಕೇತವಾಗಿದೆ. ತ್ರಿಪುಂಡ್ರವನ್ನು ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿ ಎಂತಲೂ ಕರೆಯುತ್ತಾರೆ. ಮನುಷ್ಯನ ಶರೀರದಲ್ಲಿರುವ 72 ಸಾವಿರ ನಾಡಿಗಳ ಸಮತೋಲನಕ್ಕೆ ವಿಭೂತಿ ಧಾರಣೆ ಉಪಯುಕ್ತವಾಗುತ್ತದೆ.

ಸಾಮಾನ್ಯವಾಗಿ ಹೋಮ ಮಾಡಿದಾಗ ಅದರಲ್ಲಿ ಹಾಕುವ ಸಮಿತ್ತುಗಳು, ಹಸುವಿನ ತುಪ್ಪದಿಂದ ಆಗುವ ಭಸ್ಮವನ್ನು ಹಚ್ಚಿಕೊಂಡರೆ ಅನೇಕ ತರದ ಕಾಯಿಲೆಗಳಿಂದ ಪಾರಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಜಾತಕದಲ್ಲಿರುವ ನವಗ್ರಹ ದೋಷಕ್ಕೆ ಈ ನವಧಾನ್ಯಗಳ ದಾನವೇ ಪರಿಹಾರ