Daily Horoscope
✕

2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪ್ರಾರ್ಥನೆ ಮಾಡಬೇಕು ಗಮನಿಸಿ

Krishnaveni K
ಬುಧವಾರ, 24 ಡಿಸೆಂಬರ್ 2025 (13:16 IST)
ದ್ವಾದಶ ರಾಶಿಯವರ ಗ್ರಹಗತಿಗೆ ಅನುಗುಣವಾಗಿ ಆಯಾ ದೇವರ ಪೂಜೆ ಮಾಡುವುದು ಸೂಕ್ತ. ಅದೇ ರೀತಿ 2026 ರಲ್ಲಿ ಯಾವ ರಾಶಿಯವರು ಯಾವ ದೇವರ ಪೂಜೆ ಮಾಡಬೇಕು ಇಲ್ಲಿದೆ ವಿವರ.

ಮೇಷ ರಾಶಿ: ಹನುಮಂತ, ಶನಿ ದೇವರ ಪೂಜೆ, ಮಂತ್ರಗಳನ್ನು ಪಠಿಸಿ. ಯಾಕೆಂದರೆ ಈ ರಾಶಿಯವರಿಗೆ ಸಾಡೇ ಸಾತಿ ಶನಿ ದೆಸೆ ಚಾಲ್ತಿಯಲ್ಲಿದೆ.

ವೃಷಭ: ಲಕ್ಷ್ಮೀ ದೇವಿಯ ಪೂಜೆ ಸೂಕ್ತ. ಹಣಕಾಸಿನ ಸಮಸ್ಯೆಗಳನ್ನು ನಿವಾರಿಸಲು ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ.
ಮಿಥುನ: ಶ್ರೀಕೃಷ್ಣನ ಮಂತ್ರ ಪಠಿಸುವುದು, ನವಿಲುಗರಿ ಇಟ್ಟು ಪೂಜೆ ಮಾಡುವುದರಿಂದ ಒಳಿತಾಗುವುದು.
ಕರ್ಕಟಕ: ಈ ರಾಶಿಯವರಿಗೆ ಗುರು ಗ್ರಹನ ಪ್ರವೇಶವಾಗುವುದರಿಂದ ಶಿವನ ಪೂಜೆ ಮಾಡುವುದು, ಸ್ತೋತ್ರ ಪಠಿಸುವುದು ಉತ್ತಮ.
ಸಿಂಹ: ಮಹಾವಿಷ್ಣುವಿನ ಪೂಜೆ ಮಾಡಬೇಕು. ಇದರಿಂದ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸುವಿರಿ.
ಕನ್ಯಾ: ವಿಘ್ನ ನಿವಾರಕ ಗಣೇಶನ ಪೂಜೆ ಮಾಡಿ. ಕೆಲವು ಅಡೆತಡೆಗಳು ಬರುವುದಿದ್ದು ಅದರ ನಿವಾರಣೆಗೆ ಬುಧವಾರಗಳಂದು ಗಣೇಶನ ಪೂಜೆ ಮಾಡಿ.
ತುಲಾ: ಲಕ್ಷ್ಮೀ ದೇವಿಯ ಪೂಜೆ ಸೂಕ್ತ. ಇದರಿಂದ ಸಂಬಂಧಗಳಲ್ಲಿ ಸುಧಾರಣೆ, ಮನೆಯಲ್ಲಿ ನೆಮ್ಮದಿ ನೆಲೆಸುವುದು.
ವೃಶ್ಚಿಕ: ವೈಯಕ್ತಿಕವಾಗಿ ಬದಲಾವಣೆಯ ಕಾಲವಿದು. ಹನುಮಾನ್ ಪ್ರಾರ್ಥನೆ, ಪೂಜೆಯಿಂದ ಒಳಿತಾಗುವುದು.
ಧನು: ಬೃಹಸ್ಪತಿಯ ಪ್ರಾರ್ಥನೆ ಮಾಡಿ. ಪ್ರಯಾಣದ ಅವಕಾಶಗಳು ಬರುವುದು, ಗುರಿ ಸಾಧನೆಯತ್ತ ಪಯಣ ಮಾಡಲಿದ್ದೀರಿ.
ಮಕರ: ದುರ್ಗಾ ದೇವಿಯ ಪ್ರಾರ್ಥನೆ ಸೂಕ್ತ. ಆರೋಗ್ಯ, ಮಾನಸಿಕ ಒತ್ತಡಗಳಿಂದ ನಿವಾರಣೆ ಪಡೆಯಲು ದುರ್ಗಾ ಮಾತೆಯ ಪೂಜೆ ಮಾಡಿ.
ಕುಂಭ: ಶನಿ ದೆಸೆ ಅಂತಿಮ ಹಂತದಲ್ಲಿದ್ದು ನೆಮ್ಮದಿಗಾಗಿ ಶನಿ ಪೂಜೆ, ಮಂತ್ರ ಪಠಿಸಿ.
ಮೀನ: ಶಿವ ಮತ್ತು ಶನಿ ಪ್ರಾರ್ಥನೆ. ಶನಿ ದೆಸೆ ಜಾರಿಯಲ್ಲಿದ್ದು ಇದರ ದೋಷ ನಿವಾರಣೆಗೆ ಶಿವ, ಶನಿಯ ಪೂಜೆ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಅಷ್ಟಕಂ ಸ್ತೋತ್ರ ಫಲ

ಶ್ರೀ ಶಾರದಾ ಪಂಚರತ್ನ ಸ್ತುತಿ ಕನ್ನಡದಲ್ಲಿ ಮತ್ತು ಪಠಣ ಫಲ ತಿಳಿಯಿರಿ

ವಾಯುಸ್ತುತಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಅಟ್ಟಾಲಸುಂದರಾಷ್ಟಕಂ ಸ್ತೋತ್ರ

ಶ್ರೀ ಸೂರ್ಯ ಪಂಜರ ಸ್ತೋತ್ರ

ಮುಂದಿನ ಸುದ್ದಿ
Show comments