Select Your Language

Notifications

webdunia
webdunia
webdunia
webdunia

ಕುಜ ದೋಷವಿದ್ದರೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

Kuja dosha
ಜಾತಕದಲ್ಲಿ ಕುಜ ದೋಷವಿದ್ದರೆ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮತ್ತು ಯಾವ ಸಂದರ್ಭದಲ್ಲಿ ನಮಗೆ ಕುಜ ದೋಷವಿದೆ ಎಂದು ಹೇಳಲಾಗುತ್ತದೆ ಇಲ್ಲಿದೆ ವಿವರ.

ವಿವಾಹಕ್ಕೆ ಸಮಸ್ಯೆ
ಇದು ಬಹುತೇಕೆ ಎಲ್ಲರಿಗೂ ಗೊತ್ತಿರುವ ಸಮಸ್ಯೆ. ಜಾತಕದಲ್ಲಿ 7ನೇ ಮತ್ತು 8ನೇ ಮನೆಗಳು ಪಾಲುದಾರಿಕೆ ಮತ್ತು ಒಕ್ಕೂಟದ ದೀರ್ಘಾಯುಷ್ಯವನ್ನು ನಿಯಂತ್ರಿಸುವುದರಿಂದ, ಇಲ್ಲಿನ ಮಂಗಳವು ದಾಂಪತ್ಯದಲ್ಲಿ ಕಲಹ, ವಾಗ್ವಾದ, ಪ್ರಾಬಲ್ಯ ಸಾಧಿಸುವ, ವಿವಾಹಕ್ಕೆ ವಿಳಂಬವಾಗುವುದಕ್ಕೆ ಕಾರಣವಾಗಬಹುದು

ಭಾವನಾತ್ಮಕ ಚಂಚಲತೆ
ಹೆಚ್ಚು ಯೋಚಿಸದೇ, ಪೂರ್ವಾಪರ ಚಿಂತಿಸದೇ ಸಡನ್ ಮಾತನಾಡುವುದು, ವಿಪರೀತ ಕೋಪಗೊಳ್ಳುವುದು, ಒಂದು ರೀತಿಯ ಚಡಪಡಿಕೆಯ ಭಾವ ಕಂಡುಬರಬಹುದು.

ಮನೆಯಲ್ಲಿ ಅಶಾಂತಿ
ಮಂಗಳವು 4ನೇ ಮನೆಯ ಮೇಲೆ ಪರಿಣಾಮ ಬೀರಿದಾಗ, ಮನೆಯಲ್ಲಿ ಸಮಸ್ಯೆಗಳು ಎದುರಾಗಬಹುದು.ಆಸ್ತಿ ಕಲಹ, ತಾಯಿಯೊಂದಿಗೆ ಘರ್ಷಣೆ, ಹೊಂದಾಣಿಕೆಯ ಕೊರತೆ ಕಂಡುಬರಬಹುದು.

ಆರೋಗ್ಯ ಸಮಸ್ಯೆಗಳು
ಉಷ್ಣ ಸಂಬಂಧೀ ಆರೋಗ್ಯ ಸಮಸ್ಯೆಗಳು, ಅಪಘಾತಗಳು, ಗಾಯಗಳಾಗುವ ಸಾಧ್ಯತೆ, ರಕ್ತದೊತ್ತಡ ಹೆಚ್ಚಾಗುವ ಆರೋಗ್ಯ ಸಮಸ್ಯೆಗಳು ಕಂಡುಬಂದೀತು.

Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಓದಬೇಕಾದ ಅಷ್ಟಲಕ್ಷ್ಮಿ ಸ್ತೋತ್ರ ಇಲ್ಲಿದೆ