ಬೆಂಗಳೂರು : ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಎಷ್ಟೋ ಔಷಧಿಗಳನ್ನು ಮಾಡಿದರೂ ವಾಸಿಯಾಗದಿದ್ದಲ್ಲಿ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ಈ ಕಾಯಿಲೆಯಿಂದ ಮುಕ್ತಿ ಹೊಂದಬಹುದಂತೆ.
ಹೌದು. ತಮಿಳುನಾಡಿನ ತಂಜಾವೂರ್ ನಿಂದ ಸುಮಾರು 26 ಕಿಲೋಮೀಟರ್ ದೂರದಲ್ಲಿರುವ ತಂಜಾವೂರು ಮತ್ತು ತಿರುವರೂರಿನ ಮಾರ್ಗವಾಗಿ ಚಲಿಸಿದಾಗ ಕೊಯಿಲ್ ವೆನ್ನಿ ಎಂಬ ಹಳ್ಳಿಯಲ್ಲಿರುವ ಸಾವಿರ ವರ್ಷಗಳಿಗೂ ಪುರಾತನ ಕಾಲದ ಒಂದು ಶಿವನ ದೇವಸ್ಥಾನ ಇದೆ. ಇಲ್ಲಿ ಶಿವನನ್ನು ವೆನ್ನಿ ಕರುಂಬೇಶ್ವರರ್ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ ಕರುಂಬು ಎಂದರೆ ಕಬ್ಬು ಎಂದರ್ಥ. ಇಲ್ಲಿನ ಶಿವನಿಗೆ ಕಬ್ಬಿನ ಹಾಲಿನ ಅಭಿಷೇಕ ಮತ್ತು ಅಲಂಕಾರಕ್ಕೆ ಕಬ್ಬಿನ ಜಲ್ಲೆಯನ್ನು ಭಕ್ತರು ಸಮರ್ಪಿಸುತ್ತಾರೆ
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ರವೆ ಮತ್ತು ಸಕ್ಕರೆ ಮಿಶ್ರಣದ ಕೇಸರಿಬಾತ್ ಅನ್ನು ಶಿವನಿಗೆ ಅರ್ಪಿಸಿ ಪ್ರಾರ್ಥಿಸಬೇಕು. ನಂತರ ಈ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿ ದೇವಸ್ಥಾನದ ಸುತ್ತಲೂ ಇರುವ ಇರುವೆಗಳಿಗೆ ನೀಡಬೇಕು. ಇದರಿಂದ ಸಕ್ಕರೆ ಕಾಯಿಲೆಯಿಂದ ಮುಕ್ತಿ ಪಡೆಯಬಹುದಂತೆ. ಹೀಗೆ ಮಾಡಿ ಪರಿಹಾರ ಕಂಡುಕೊಂಡವರು ಹಲವು ಮಂದಿ ಇದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.