Publish Date: Thu, 29 Oct 2020 (08:18 IST)
Updated Date: Thu, 29 Oct 2020 (08:20 IST)
ಬೆಂಗಳೂರು : ಗ್ರಹಗಳ ಸ್ಥಾನ ಬದಲಾದಾಗ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಇದರಿಂದಾಗುವ ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೊಣ.
ಸಾಮಾನ್ಯವಾಗಿ ಕನ್ಯಾರಾಶಿಯಲ್ಲಿ ಜನಿಸಿದವರು ಅಯ್ಯಪ್ಪ ಸ್ವಾಮಿಯನ್ನು ಪೂಜಿಸಿದರೆ ಉತ್ತಮ. ಅಯ್ಯಪ್ಪ ಸ್ವಾಮಿಯ ಫೋಟೊ ಮುಂದೆ ತುಪ್ಪದ ದೀಪವನ್ನು ಹಚ್ಚಿ ಪೂಜಿಸಬೇಕು. ಮತ್ತು ತುಪ್ಪದಿಂದ ಮಾಡಿದ ಸಿಹಿಯನ್ನು ಅರ್ಪಿಸಿ. ಇದರಿಂದ ಗ್ರಹಗಳ ಸ್ಥಾನ ಬದಲಾವಣೆಯಿಂದಾಗುವ ದೋಷವನ್ನು ನಿವಾರಿಸಬಹುದು.