ಈ ರಾಶಿಯವರ ಮೇಲೆ ಈ ವರ್ಷ ಶನಿ ಪ್ರಭಾವವಿರಲಿದೆ

Krishnaveni K
ಮಂಗಳವಾರ, 5 ಮಾರ್ಚ್ 2024 (09:38 IST)
Photo Courtesy: Twitter
ಬೆಂಗಳೂರು: ಶನಿಕಾಟ ಎಂದ ತಕ್ಷಣ ನಾವು ಆತಂಕಗೊಳ್ಳುತ್ತೇವೆ. ಕಷ್ಟ ಶುರು ಎಂದುಕೊಳ್ಳುತ್ತೇವೆ. ಆದರೆ ಶನಿ ಒಲಿದರೆ ಅಷ್ಟೇ ಲಾಭಕಾರಕನೂ ಆಗಬಲ್ಲನು. ಈ ವರ್ಷ ಯಾವೆಲ್ಲಾ ರಾಶಿಯವರಿಗೆ ಶನಿಯ ಪ್ರಭಾವವಿರಲಿದೆ ಎಂದು ನೋಡೋಣ.

ನಮ್ಮ ರಾಶಿಗೆ ಶನಿಯ ವಕ್ರ ದೃಷ್ಟಿ ಬಿತ್ತೆಂದರೆ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ನೋಡಬೇಕಾಗುತ್ತದೆ. ದೇಹದ ಅಂಗಾಂಗಕ್ಕೆ ಹಾನಿಯಾಗುವುದು, ಆರ್ಥಿಕವಾಗಿ ನಷ್ಟ, ಉದ್ಯೋಗ ನಷ್ಟ ಭೀತಿ, ಸಂಬಂಧಗಳಲ್ಲಿ ಒಡಕು ಇತ್ಯಾದಿ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಶನಿ ಕಾರಣವಾಗಬಲ್ಲನು.

ಆದರೆ ಶನಿಯ ದಯಾದೃಷ್ಟಿ ನಮ್ಮ ಮೇಲಿದ್ದರೆ ಜೀವನದಲ್ಲಿ ಅತ್ಯಂತ ಹೆಚ್ಚು ಏಳಿಗೆಯನ್ನು ಕಾಣಲು ಸಾಧ‍್ಯವಿದೆ. ಆರ್ಥಿಕವಾಗಿ, ವೃತ್ತಿಪರವಾಗಿ ಯಶಸ್ಸು ಸಾಧಿಸುತ್ತೇವೆ. ಅದೇ ರೀತಿ ಸಾಮಾಜಿಕವಾಗಿ ನಮ್ಮ ಸ್ಥಾನ ಮಾನ ವೃದ್ಧಿಯಾಗುತ್ತದೆ. ಹೀಗಾಗಿ ಶನಿ ಕೆಟ್ಟದ್ದನ್ನೇ ಮಾಡುತ್ತಾನೆ ಎಂಬ ಅಪನಂಬಿಕೆ ಬೇಡ.

2024 ರಲ್ಲಿ ಶನಿ ಅತೀ ಹೆಚ್ಚು ಪ್ರಭಾವ ಹೊಂದಿರುವುದು ಕುಂಭ ರಾಶಿ ಮೇಲೆ. ಜೂನ್ ಕೊನೆಯ ಭಾಗದಿಂದ ನವಂಬರ್ ಮಧ್ಯದವರೆಗೆ ಮಕರ ರಾಶಿಯವರಿಗೂ ಸ್ವಲ್ಪ ಶನಿ ಪ್ರಭಾವ ಕಂಡುಬರಬಹುದು. ಆದರೆ ಶನಿಯ ಪ್ರಭಾವದಿಂದ ಕುಂಭ ರಾಶಿಯವರಿಗೆ ನಷ್ಟಕ್ಕಿಂತ ಒಳ್ಳೆಯದೇ ಆಗಲಿದೆ. ಸಾಮಾಜಿಕವಾಗಿ ಸ್ಥಾನಮಾನ, ಯಶಸ್ಸು ಸಾಧಿಸುವ ಯೋಗವಿದೆ. ಈ ವರ್ಷ ಶನಿಯು ಕುಂಭ ರಾಶಿಯಲ್ಲಿ ನೆಲೆಯಾಗುವುದರಿಂದ ಅದರ ಅಕ್ಕಪಕ್ಕದ ರಾಶಿಯವರಿಗೂ ತಕ್ಕಮಟ್ಟಿಗೆ ಪ್ರಭಾವ ಉಂಟಾಗಬಹುದು. ಶನಿಯ ಕೃಪಾಕಟಾಕ್ಷಕ್ಕೆ ಒಳಗಾಗಲು ಆಂಜನೇಯ ಸ್ವಾಮಿಯ ಸೇವೆ, ಕಾಗೆಗಳಿಗೆ ಆಹಾರ ನೀಡುವುದು, ಶನಿ ಪೂಜೆ ಮಾಡುತ್ತಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments