Webdunia - Bharat's app for daily news and videos

Install App

ಸೋಮವಾರ ಈ ಬಣ್ಣದ ಬಟ್ಟೆ ಧರಿಸಿದರೆ ಶುಭ

Krishnaveni K
ಸೋಮವಾರ, 8 ಜುಲೈ 2024 (09:30 IST)
ಬೆಂಗಳೂರು: ಸೋಮವಾರ ಎಂದರೆ ವಾರದ ಆರಂಭದ ದಿನ. ಹೊಸದೊಂದು ವಾರ ಆರಂಭವಾಗುವಾಗ ಈ ವಾರವಿಡೀ ಶುಭವಾಗಿಯೇ ಇರಲಿ ಎಂದು ಅಂದುಕೊಂಡೇ ದಿನ ಶುರು ಮಾಡುತ್ತೇವೆ. ಸೋಮವಾರದಂದು ಯಾವ ಬಣ್ಣದ ಬಟ್ಟೆ ಧರಿಸಿದರೆ ಶುಭ ಎಂದು ನೋಡೋಣ.

ಸೋಮವಾರವೆಂದರೆ ಶಿವನನ್ನು ಆರಾಧಿಸುವ ದಿನ. ಇಂದು ಯಾವುದೇ ಕೆಲಸಕ್ಕೆ ಮುನ್ನ ಶಿವನನ್ನು ಪೂಜೆ ಮಾಡಿ ಮುಂದುವರಿದರೆ ಎಲ್ಲವೂ  ಶುಭವಾಗುತ್ತದೆ. ಕೆಲವರು ಈ ದಿನ ಉಪವಾಸವಿದ್ದು ಶಿವನನ್ನು ಆರಾಧಿಸುತ್ತಾರೆ. ಈ ದಿನ ಶಿವನಿಗೆ ಹಾಲಿನ ಅಭಿಷೇಕ ಮಾಡಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ಶಿವನಿಗೆ ಪ್ರಿಯವಾದ ಬಣ್ಣವೆಂದರೆ ಬಿಳಿ ಬಣ್ಣ. ಸೋಮವಾರ ಶಿವನಿಗೆಂದೇ ಮೀಸಲಾದ ದಿನ. ಹೀಗಾಗಿ ಭಗವಾನ್ ಶಿವನಿಗೆ ಪ್ರಿಯವಾದ ಬಿಳಿಯ ಬಣ್ಣದ ಬಟ್ಟೆ ಧರಿಸುವುದು ಇಂದಿನ ದಿನ ನಿಮಗೆ ಅದೃಷ್ಟ ತಂದುಕೊಡುತ್ತದೆ. ಬಿಳಿ ಬಣ್ಣದ ಬಟ್ಟೆ, ವಸ್ತುಗಳನ್ನೇ ಧರಿಸಿದರೆ ಅತ್ಯಂತ ಶುಭದಾಯಕವಾಗಿರುತ್ತದೆ.

ಅದರ ಜೊತೆಗೆ ಯಾರಿಗಾದರೂ ದಾನ ಮಾಡುವಾಗ ಬಿಳಿ ಬಣ್ಣದ ಹಾಲು, ಸಕ್ಕರೆ, ಅಕ್ಕಿ, ಧಾನ್ಯಗಳನ್ನು ದಾನ ಮಾಡಿದರೆ ನಿಮಗೆ ಒಳಿತಾಗುತ್ತದೆ. ಅಲ್ಲದೆ ಜಾತಕದಲ್ಲಿ ಚಂದ್ರನ ಬಲ ಹೆಚ್ಚಾಗಬೇಕೆಂದರೆ ಈ ದಿನ ಚಂದ್ರಶೇಖರ ಸ್ತೋತ್ರವನ್ನು ಪಠಣ ಮಾಡಿದರೆ ನಿಮಗೆ ಒಳಿತಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಸಂಜೆ ದೀಪ ಹಚ್ಚುವಾಗ ಶ್ರೀ ಮಹಾಲಕ್ಷ್ಮೀ ಕವಚಂ ಸ್ತೋತ್ರ ಪಠಿಸಿ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಮುಂದಿನ ಸುದ್ದಿ
Show comments