ಬೆಂಗಳೂರು : ಗೌರಿ ವ್ರತ ಮಾಡಿದ ಬಳಿಕ ಮುತ್ತೈದೆಯರಿಗೆ ಬಾಗಿನ ಕೊಡುವ ಶಾಸ್ತ್ರವಿದೆ. ಮುತ್ತೈದೆಯರಿಗೆ ನೀಡುವ ಈ ಬಾಗಿನದಲ್ಲಿ ಕೆಲವೊಂದು ವಸ್ತುಗಳನ್ನು ಹಾಕಿರುತ್ತಾರೆ. ಅದು ಒಂದೊಂದು ಪದಾರ್ಥವು ಒಂದೊಂದು ದೇವತೆಯ ಸಂಕೇತವಂತೆ. ಅದು ಯಾವ ದೇವರು ಎಂಬುದನ್ನು ತಿಳಿಯೋಣ. *ಅರಿಶಿನ-ಗೌರಿ ದೇವಿಯ ಸಂಕೇತ *ಕುಂಕುಮ-ಮಹಾಲಕ್ಷ್ಮೀಯ ಸಂಕೇತ. *ಸಿಂಧೂರ-ಸರಸ್ವತಿ ದೇವಿಯ ಸಂಕೇತ. *ಕನ್ನಡಿ-ರೂಪಲಕ್ಷ್ಮೀಯ ಸಂಕೇತ. *ಬಾಚಣಿಗೆ – ಶೃಂಗಾರಲಕ್ಷ್ಮೀಯ ಸಂಕೇತ. *ಕಾಡಿಗೆ – ಲಜ್ಜಾ ಲಕ್ಷ್ಮೀಯ ಸಂಕೇತ. *ಅಕ್ಕಿ- ಶ್ರೀಲಕ್ಷ್ಮೀಯ ಸಂಕೇತ. *ತೊಗರಿಬೇಳೆ- ವರಲಕ್ಷ್ಮೀಯ ಸಂಕೇತ. *ಉದ್ದಿನಬೇಳೆ-ಸಿದ್ದಲಕ್ಷ್ಮೀಯ ಸಂಕೇತ. *ತೆಂಗಿನಕಾಯಿ-ಸಂತಾನಲಕ್ಷ್ಮೀಯ ಸಂಕೇತ. *ವೀಳ್ಯದೆಲೆ-ಧನಲಕ್ಷ್ಮೀಯ ಸಂಕೇತ. *ಅಡಿಕೆ-ಇಷ್ಟಲಕ್ಷ್ಮೀಯ ಸಂಕೇತ. *ಫಲ-ಜ್ಞಾನ ಲಕ್ಷ್ಮೀಯ ಸಂಕೇತ. *ಬೆಲ್ಲ- ರಸಲಕ್ಷ್ಮೀಯ ಸಂಕೇತ. *ವಸ್ತ್ರ-ವಸ್ತ್ರಲಕ್ಷ್ಮೀಯ ಸಂಕೇತ. *ಹೆಸರುಬೇಳೆ-ವಿದ್ಯಾಲಕ್ಷ್ಮೀಯ ಸಂಕೇತ.