Publish Date: Fri, 03 Jan 2020 (06:21 IST)
Updated Date: Fri, 03 Jan 2020 (06:22 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಸಿಂಹರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.
ಸಿಂಹರಾಶಿಯಲ್ಲಿ ಹುಟ್ಟಿದವರು ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಸಿಂಹರಾಶಿಯಲ್ಲಿ ಹುಟ್ಟಿದವರು ಹೊಟ್ಟೆ ಹಸಿದವರಿಗೆ ಅನ್ನದಾನ ಮಾಡಬೇಕು. ಇದರಿಂದ ಜಾತಕದಲ್ಲಿರುವ ದೋಷ ಪರಿಹಾರವಾಗುವುದಲ್ಲದೇ ಧನಲಾಭವಾಗುತ್ತದೆ. ನೀವು ಪಾರ್ವತಿಯ ದೇವಿಯ ಪೂಜೆ ಮಾಡಬೇಕು.
ಹಾಗೇ ಈ ರಾಶಿಯವರು ಕೆಂಪು ಬಣ್ಣದ ಗುಲಾಬಿ ಹೂವಿನ ಗಿಡವನ್ನು ಬೆಳೆಸಬೇಕು. ಹಾಗೇ ಇದಕ್ಕೆ ಪ್ರತಿದಿನ ನೀರು ಹಾಕಬೇಕು. ಹೀಗೆ ಮಾಡಿದರೆ ನಿಮಗೆ ಆಕಸ್ಮಿಕ ಧನಪ್ರಾಪ್ತಿಯಾಗುತ್ತದೆ. ಸಿಂಹರಾಶಿಯವರಿಗೆ ದುಡಿದ ಹಣ ಕೈಯಲ್ಲಿ ಉಳಿಯುತ್ತಿಲ್ಲವಾದರೆ ರೊಟ್ಟಿಗೆ ಕಪ್ಪು ಎಳ್ಳನ್ನು ಚುಕ್ಕೆ ಹಾಗೆ ಇಟ್ಟು ಕಪ್ಪು ಬಣ್ಣದ ನಾಯಿಗೆ ಹಾಕಬೇಕು.