Webdunia - Bharat's app for daily news and videos

Install App

Shani dosha horoscope 2025: ಮೇಷ ರಾಶಿಯವರಿಗೆ 2025 ರಲ್ಲಿ ಶನಿ ದೆಸೆ ಇದೆಯೇ

Krishnaveni K
ಬುಧವಾರ, 27 ನವೆಂಬರ್ 2024 (09:02 IST)
ಬೆಂಗಳೂರು: ಮೇಷ ರಾಶಿಯವರಿಗೆ 2025 ರಲ್ಲಿ ಶನಿ ದೆಸೆ ಇದೆಯೇ ಇದ್ದರೆ ಯಾವಾಗ ಮತ್ತು ಯಾವ ರೀತಿ ಪರಿಣಾಮ ಬೀರಲಿದ್ದಾನೆ ಎಂಬಿತ್ಯಾದಿ ವಿವರಗಳು ಇಲ್ಲಿದೆ ನೋಡಿ. ಮೇಷ ರಾಶಿಯವರಿಗೆ 2025 ಸಮೃದ್ಧಿಯ ವರ್ಷ. ಆದರೆ ಶನಿ ದೆಸೆಯೂ ಈ ವರ್ಷ ಇರಲಿದೆ.

ಶನಿ ದೆಸೆ ಎಂದರೆ ಕೆಟ್ಟದ್ದೇ ಮಾಡಬೇಕೆಂದೇನಿಲ್ಲ. ಆಯಾ ರಾಶಿಯವರ ಕರ್ಮ ಫಲಗಳಿಗೆ ಅನುಸಾರವಾಗಿ ಶನಿ ದೆಸೆ ಒಳಿತು ಅಥವಾ ಕೆಡುಕು ಮಾಡಬಹುದು. ಶನಿ ಗ್ರಹವನ್ನು ನ್ಯಾಯಕಾರಕ, ಕರ್ಮಕಾರಕ ಎಂದೇ ಪರಿಗಣಿಸಲಾಗುತ್ತದೆ.

ಮೇಷ ರಾಶಿಯವರಿಗೆ ಈ ವರ್ಷ ಕಿರು ಅವಧಿಯಲ್ಲಿ ಶನಿ ಗ್ರಹದ ಪ್ರಭಾವ ಕಂಡುಬರಲಿದೆ. ಮಾರ್ಚ್ ನಿಂದ ಮೇ ಕೊನೆಯವರೆಗೆ ಶನಿ ದೆಸೆಯಿರಲಿದೆ. ಆದರೆ ಈ ಸಮಯದಲ್ಲಿ ನಿಮಗೆ ಶನಿ ಒಳಿತನ್ನೇ ಮಾಡಲಿದ್ದಾನೆ ಎನ್ನುವುದು ಗಮನಾರ್ಹ.

ಉದ್ಯೋಗ, ಕೌಟುಂಬಿಕವಾಗಿ ಮತ್ತು ಹಣಕಾಸಿನ ವಿಚಾರದಲ್ಲಿ ಶನಿಯ ಪ್ರಭಾವದಿಂದ ನೀವು ಏಳಿಗೆ ಕಾಣಲಿದ್ದೀರಿ. ಏಪ್ರಿಲ್ ವರೆಗೆ ಶನಿಯಿಂದ ನಿಮಗೆ ಸಾಕಷ್ಟು ಅಭಿವೃದ್ಧಿಯಾಗಲಿದೆ. ಆದರೆ ಮೇಯಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆಯಿದೆ.

ಮೇ ತಿಂಗಳಿನಲ್ಲಿ ನೀವು ಮಾಡಿರುವ ಹೂಡಿಕೆಗಳಿಂದ ನಷ್ಟ ಅನುಭವಿಸಬೇಕಾದೀತು. ಕೌಟುಂಬಿಕವಾಗಿ ಕೆಲವು ಸಮಸ್ಯೆಗಳು ಬಂದೀತು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ. ಹೀಗಾಗಿ ಈ ಸಮಯದಲ್ಲಿ ಶನಿ ದೇವನ ಸೇವೆಯನ್ನು ಆದಷ್ಟು ಮಾಡುತ್ತಿದ್ದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments