Webdunia - Bharat's app for daily news and videos

Install App

ಕಾಳ ಸರ್ಪ ದೋಷಕ್ಕೆ ಪರಿಹಾರಗಳೇನು

Krishnaveni K
ಸೋಮವಾರ, 27 ಮೇ 2024 (09:23 IST)
ಬೆಂಗಳೂರು: ನಮ್ಮ ಜಾತಕದಲ್ಲಿ ಕಂಡುಬರುವ ದೋಷಗಳಲ್ಲಿ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರುವ ದೋಷವೆಂದರೆ ಅದು ಕಾಳ ಸರ್ಪ ದೋಷ. ಇದು ಎದುರಾದರೆ ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ.

ನಮ್ಮ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ನಡುವೆ ಎಲ್ಲಾ ಗ್ರಹಗಳು ಸಿಲುಕಿಕೊಂಡಾಗ ಕಾಳ ಸರ್ಪ ದೋಷ ಕಂಡುಬರುತ್ತದೆ. ರಾಹು ಸರ್ಪದ ಶಿರದಂತೆ ಮತ್ತು ಕೇತು ಬಾಲದಂತೆ ಕಂಡುಬರುತ್ತದೆ. ಕುಂಡಲಿಯಲ್ಲಿ ಗ್ರಹಗತಿಗಳು ರೀತಿ ಇದ್ದಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತೀರಿ.

ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ, ವ್ಯಾಪಾರ, ವ್ಯವಹಾರಗಳಿಗೆ ತೊಂದರೆ, ಹಣಕಾಸಿನ ನಷ್ಟ, ಅಪವಾದಗಳು, ವೈವಾಹಿಕ ಜೀವನದಲ್ಲಿ ಸಮಸ್ಯೆ ಕಂಡುಬರಬಹುದು. ಕೈ ಹಿಡಿದ ಕೆಲಸಗಳೊಂದೂ ಕೈಗೂಡದಂತಾಗಬಹುದು. ವಿಪರೀತ ಚಿಂತೆ, ಮಾನಸಿಕವಾಗಿಯೂ ಕುಗ್ಗಿ ಹೋಗುತ್ತೀರಿ.

ಕಾಳಸರ್ಪ ದೋಷದ ಪ್ರಭಾವ ಕೊಂಚ ಮಟ್ಟಿಗೆ ಕಡಿಮೆಯಾಗಬೇಕಾದರೆ ಶಿವ ಮತ್ತು ನಾಗನಿಗೆ ಪೂಜೆ ಮಾಡಬೇಕು. ಸೋಮವಾರಗಳಂದು ಉಪವಾಸವಿದ್ದು ಶಿವನ ಪೂಜೆ ಮಾಡಬೇಕು. ಜೊತೆಗೆ ಓಂ ನಮಃ ಶಿವಾಯ ಮಂತ್ರ ಜಪಿಸಬೇಕು. ಜೊತೆಗೆ ನಾಗನಿಗೆ ಸಂಬಂಧಿಸಿದಂತೆ ಪೂಜೆ ಓಂ ನಾಗಕುಲಾಯ ವಿದ್ಮಹೇ ವಿಷದಂತಾಯ ಧೀಮಹೀ ತನ್ನೋ ಸರ್ಪ ಪ್ರಚೋದಯಾತ್ಮಂತ್ರವನ್ನು ಪಠಿಸಬೇಕು. ಜೊತೆಗೆ ವಿಷ್ಣುಸಹಸ್ರನಾಮಾವಳಿಯನ್ನು ಪ್ರತಿನಿತ್ಯ ಓದುವುದು ದೋಷವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

Shani Dasha Horoscope 2025: ಶನಿ ದೆಶೆಯಿಂದ ಹೈರಾಣಾಗಿರುವ ಕುಂಭ ರಾಶಿಯವರಿಗೆ 2025 ರಲ್ಲಿ ಮುಕ್ತಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dasha Horoscope 2025: ವೃಶ್ಚಿಕ ರಾಶಿಯವರಿಗೆ ಶನಿ ಗ್ರಹಚಾರ ಈ ವರ್ಷ ಇರುತ್ತಾ

Shani Dasha horoscope 2025: ತುಲಾ ರಾಶಿಯವರಿಗೆ ಈ ವರ್ಷ ಶನಿಯಿಂದ ಲಾಭ ಯಾಕೆ

ಮುಂದಿನ ಸುದ್ದಿ
Show comments