Webdunia - Bharat's app for daily news and videos

Install App

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Sampriya
ಭಾನುವಾರ, 4 ಮೇ 2025 (10:41 IST)
Photo Courtesy X
ಪ್ರತಿ ದಿನವೂ ಸೂರ್ಯದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದರೆ ಭಾನುವಾರ ಹಿಂದೂ ಧರ್ಮದ ಪ್ರಕಾರ ಸೂರ್ಯ ದೇವನಿಗೆ ಮೀಸಲಾದ ದಿನವಾಗಿದೆ. ಈ ದಿನದಂದು ನಾವು ಸೂರ್ಯದೇವನಿಗೆ ವಿಶೇಷ ಪೂಜೆಯನ್ನು ಮಾಡುವುದರಿಂದ  ಸೂರ್ಯ ತೇಜದ ಪ್ರಭೆ ನಮ್ಮ ಬದುಕಿನಲ್ಲೂ ಪ್ರತಿಫಲಿಸುವುದು ಎಂಬ ನಂಬಿಕೆಯಿದೆ.

ಸೂರ್ಯನನ್ನು ನವಗ್ರಹಗಳಿಗೂ ಅಧಿಪತಿ ಎಂದು ಗುರುತಿಸಲಾಗಿದೆ. ಭೂಮಿಯಲ್ಲಿರುವ ಸಕಲ ಜೀವ ಜಂತುಗಳಿಗೂ ಸೂರ್ಯ ಬೇಕೇಬೇಕು. ಸೂರ್ಯ ಪ್ರಕಾಶ ಭೂಮಿಗೆ ಸ್ಪರ್ಶಿಸಿದರೆ ಮಾತ್ರ ಜಗತ್ತಿಗೆ ಬೆಳಕು ಸಿಗುವುದು. ಸೂರ್ಯನನ್ನು ಆರಾಧಿಸುವುದರಿಂದ ಶಕ್ತಿ ದೊರೆಯುವುದು, ಸಕಲ ದೂರವಾಗುವುದು ಎಂಬ ನಂಬಿಕೆ.

ಅನೇಕ ರೋಗಗಳನ್ನು ಗುಣ ಪಡಿಸುವ ಶಕ್ತಿ ಸೂರ್ಯ ರಶ್ಮಿಯಲ್ಲಿದೆ ಎಂಬುವುದನ್ನು ವಿಜ್ಞಾನವೂ ಹೇಳುತ್ತದೆ.

ಸೂರ್ಯನಿಗೆ ಮನೆಯಲ್ಲಿ ನಿತ್ಯವೂ ಪೂಜೆ ಸಲ್ಲಿಸಬಹುದು. ಬೆಳಗ್ಗೆ ಎದ್ದು, ಸ್ನಾನ ಮಾಡಿ, ಬಿಳಿ ಶುಭ್ರ ಬಟ್ಟೆ ಧರಿಸಿ, ಸೂರ್ಯನಿಗೆ ಆರ್ಘ್ಯ ಅರ್ಪಿಸಿ. ನಂತರ ಸೂರ್ಯ ಮಂತ್ರಗಳನ್ನು ಪಠಿಸಿ. ಸೂರ್ಯ ಗಾಯತ್ರಿ ಮಂತ್ರ ತಪ್ಪದೆ ಪಠಿಸಿ. ನಂತರ ತಮ್ಮೆಲ್ಲಾ ಬಯಕೆ ಈಡೇರಿಸಿಕೊಡುವಂತೆ ಸೂರ್ಯನಲ್ಲಿ ಪ್ರಾರ್ಥಿಸಿ.

ಇದರಿಂದ ಜೀವನದಲ್ಲಿ ಬರುವ ಕಷ್ಟಗಳು ದೂರವಾಗಿ, ಬಾಳಲ್ಲಿ ನೆಮ್ಮದಿ ನೆಲೆಸುತ್ತದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Astotthara: ಶನಿ ಅಷ್ಟೋತ್ತರವನ್ನು ತಪ್ಪದೇ ಓದಿ

Lakshmi mantra: ಆದಿಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Narasimhastakam: ನರಸಿಂಹಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Durga Mantra: ದುರ್ಗಾ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva mantra: ಇಂದು ಶಿವ ಅಷ್ಟೋತ್ತರ ತಪ್ಪದೇ ಓದಿ

ಮುಂದಿನ ಸುದ್ದಿ
Show comments