Select Your Language

Notifications

webdunia
webdunia
webdunia
webdunia

ನವರಾತ್ರಿಯ 3ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ

ನವರಾತ್ರಿಯ 3ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ
ಬೆಂಗಳೂರು , ಸೋಮವಾರ, 19 ಅಕ್ಟೋಬರ್ 2020 (07:04 IST)
ಬೆಂಗಳೂರು : ಇಂದು ನವರಾತ್ರಿಯ 3ನೇ ದಿನ. ಈ ದಿನ ಚಂದ್ರಘಂಟಾ ದೇವಿಯನ್ನು ಪೂಜಿಸುತ್ತೇವೆ. ಇಂದು ದೇವಿಗೆ ಯಾವ ಹೂಗಳಿಂದ ಹಾಗೂ ಯಾವ ನೈವೇದ್ಯದಿಂದ ಪೂಜಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.

ಇಂದು ಚಂದ್ರಘಂಟಾ ದೇವಿಯನ್ನು ಅನ್ನಪೂರ್ಣೆಶ್ವರಿ ದೇವಿ ಅಥವಾ ಗಾಯತ್ರಿ ದೇವಿಯ ಫೋಟೊದ ಮೂಲಕ  ಪೂಜಿಸಬಹುದು. ದೇವಿಗೆ ಕನಕಾಂಬರ, ಕೆಂಪು, ಹಳದಿ ಬಣ್ಣದ  ಹೂಗಳಿಂದ ಅಲಂಕಾರವನ್ನು ಮಾಡಿ. ಇದರಿಂದ ಜೀವನದ ದಾರಿದ್ರ್ಯ ದೋಷ ಕಳೆಯುತ್ತದೆ. ದೇವಿಗೆ ತೆಂಗಿನಕಾಯಿ ಜೊತೆಗೆ ಬೇಯಿಸಿದ ಅನ್ನವನ್ನು ಹಾಗೂ ಹಾಲು, ಬೆಲ್ಲವನ್ನು ನೈವೇದ್ಯವಾಗಿ ಇಟ್ಟರೆ ಚಂದ್ರಘಂಟಾದೇವಿಯ ಅನುಗ್ರಹವಾಗುತ್ತದೆ. ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಇಂದು ದೇವಿಯನ್ನು ಪೂಜಿಸುವಾಗ “ಓಂ ಹ್ರೀಂ ಶ್ರೀಂ ಚಂದ್ರಘಂಟ ದುರ್ಗಾಯೈ ನಮಃ” ಮಂತ್ರವನ್ನು 3, 11, 21, 108 ಬಾರಿ ಪಠಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?