Webdunia - Bharat's app for daily news and videos

Install App

ಮೃತ್ಯುಂಜಯ ಮಂತ್ರ ಪಠಿಸುವುದರ ಉಪಯೋಗವೇನು, ಎಷ್ಟು ಬಾರಿ ಪಠಿಸಬೇಕು

Krishnaveni K
ಸೋಮವಾರ, 23 ಸೆಪ್ಟಂಬರ್ 2024 (08:51 IST)
ಬೆಂಗಳೂರು: ಶಿವನ ಮತ್ತೊಂದು ರೂಪವಾದ ಮೃತ್ಯುಂಜಯನನ್ನು ಕುರಿತು ಜಪಿಸಿದರೆ ನಮಗೆ ಮೃತ್ಯು ಭಯ, ರೋಗ ಭಯ ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಮೃತ್ಯುಂಜಯ ಮಂತ್ರದ ಬಗ್ಗೆ ಇಂದು ತಿಳಿದುಕೊಳ್ಳೋಣ.

ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದರೆ ಭಗವಾನ್ ಶಿವನು ಅತ್ಯಂತ ಸಂಪ್ರೀತನಾಗುತ್ತಾನೆ. ಮರಣ ಭಯವಿದ್ದರೆ ಮೃತ್ಯುಂಜಯ ಮಂತ್ರ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ಶಿವ ಪುರಾಣದಲ್ಲೇ ಹೇಳಲಾಗಿದೆ. ಗ್ರಹಗತಿಗಳ ಸಮಸ್ಯೆಯಿದ್ದರೂ ಮೃತ್ಯುಂಜಯ ಮಂತ್ರ ಜಪಿಸುವುದರಿಂದ ದೋಷ ನಿವಾರಣೆಯಾಗುತ್ತದೆ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೋರ್ಮುಕ್ಷೀಯ ಮಾಂಮೃತಾತ್
ಇದು ಮೃತ್ಯುಂಜಯ ಮಂತ್ರವಾಗಿದೆ. ಇದನ್ನು ಪ್ರತಿನಿತ್ಯ 108 ಬಾರಿ ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ಕಾಣುವಿರಿ. ಆದರೆ ನೆನಪಿರಲಿ, ಮೃತ್ಯುಂಜಯ ಮಂತ್ರ ಪಠಿಸುವಾಗ ಕೆಲವೊಂದು ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು. ತಪ್ಪುಗಳಾದರೆ ಶಿವನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಮುಂಜಾನೆ ಎದ್ದು ಸ್ನಾನ ಮಾಡಿ ಕೈಯಲ್ಲಿ ರುದ್ರಾಕ್ಷಿ ಸರ ಹಿಡಿದು ಮಣೆ ಮೇಲೆ ಕುಳಿತು ಮೃತ್ಯುಂಜಯ ಜಪ ಮಾಡಬೇಕು. ಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಮನಸ್ಸಿನಲ್ಲೇ ಹೇಳಬೇಕು. ಶಿವನ ಫೋಟೋ ಮುಂದೆ ಕುಳಿತುಕೊಂಡು ಏಕಾಗ್ರತೆಯಿಂದ ಮಂತ್ರೋಚ್ಛಾರಣೆ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿವಾರ ಈ ಕೆಲಸಗಳನ್ನು ಮಾಡಿದರೆ ಶನಿ ದೋಷ ಬರುತ್ತದೆ ಹುಷಾರು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕುಬೇರ ಮಂತ್ರ ಯಾವುದು, ಎಷ್ಟು ದಿನ ಓದಿದರೆ ದಾರಿದ್ರ್ಯ ದೂರವಾಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಹಾವಿಷ್ಣುವಿನ ಈ ಒಂದು ಮಂತ್ರ ಹೇಳಿದರೆ ಅನಾರೋಗ್ಯ ಸಮಸ್ಯೆಗೆ ಮುಕ್ತಿ

ಮುಂದಿನ ಸುದ್ದಿ
Show comments