Webdunia - Bharat's app for daily news and videos

Install App

ಶಿವರಾತ್ರಿ ದಿನ ಜಪಿಸಲೇಬೇಕಾದ ಮಂತ್ರಗಳು ಯಾವುವು ಇಲ್ಲಿದೆ ನೋಡಿ

Krishnaveni K
ಬುಧವಾರ, 26 ಫೆಬ್ರವರಿ 2025 (08:39 IST)
ಬೆಂಗಳೂರು: ಇಂದು ಶಿವರಾತ್ರಿಯಾಗಿದ್ದು ಈ ದಿನ ಶಿವನನ್ನು ಕುರಿತು ಪೂಜೆ, ಭಜನೆ ಮಾಡುತ್ತಾ ಕಾಲ ಕಳೆದರೆ ಮೋಕ್ಷ ಸಿಗುವುದು ಎಂಬ ನಂಬಿಕೆ ಹಿಂದೂಗಳಲ್ಲಿದೆ. ಈ ದಿನ ಯಾವ ಮಂತ್ರಗಳನ್ನು ಜಪಿಸಬೇಕು ಇಲ್ಲಿದೆ ವಿವರ.

ಶಿವರಾತ್ರಿ ದಿನ ಹಗಲು ಮತ್ತು ರಾತ್ರಿಯಿಡೀ ಶಿವ ಭಜನೆಯಲ್ಲಿ ಕಾಲ ಕಳೆಯಬೇಕು. ಇದರಿಂದ ಶಿವನು ಸಂತೃಪ್ತನಾಗಿ ನೀವು ಬೇಡಿದ ವರವನ್ನು ನೀಡುವನದಲ್ಲದೆ ನಿಮ್ಮ ಜೀವನದ ದುರಿತಗಳೆಲ್ಲವೂ ಪರಿಹಾರವಾಗುವುದು ಎಂಬ ನಂಬಿಕೆಯಿದೆ.

ಇಂದು ದಿನವಿಡೀ ಉಪವಾಸವಿದ್ದು ಭಕ್ತಿಯಿಂದ ಶಿವನ ಧ್ಯಾನದಲ್ಲಿ ಕಾಲ ಕಳೆಯಬೇಕು. ಶಿವನ ಮೂಲ ಮಂತ್ರವಾದ ‘ಓಂ ನಮಃ ಶಿವಾಯ’ ಎನ್ನುವ ಮಂತ್ರವನ್ನು ಜಪಿಸುತ್ತಿರಬೇಕು. ಇಂದು ಅಸಂಖ್ಯಾತ ಬಾರಿ ಈ ಮಂತ್ರವನ್ನು ಜಪಿಸುತ್ತಿರಿ.

ಅದೇ ರೀತಿ ಶಿವನ ಮೃತ್ಯುಂಜಯ ಮಂತ್ರ ಹೇಳುತ್ತಿದ್ದರೆ ಅಕಾಲ ಮರಣ, ಅನಾರೋಗ್ಯ ನಿವಾರಣೆಯಾಗುವುದು. ಕೆಲಸ, ವಿದ್ಯೆಯಲ್ಲಿ ಏಕಾಗ್ರತೆಗಾಗಿ ಇಂದು ಶಿವನ ಧ್ಯಾನ ಮಂತ್ರವನ್ನು ಪಠಿಸುತ್ತಿರಿ. ಅದೇ ರೀತಿ ನಿಮ್ಮ ಮನೋಕಾಮನೆಗಳ ಪೂರೈಕೆಗಾಗಿ ಶಿವನ ರುದ್ರ ಮಂತ್ರವನ್ನು ಪಠಿಸಬೇಕು. ಇನ್ನು, ಶಿವನ ಗಾಯತ್ರಿ ಮಂತ್ರವನ್ನು ಪಠಿಸುವ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ನಿಮ್ಮದಾಗಿಸಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ರೋಗ, ನೋವು ನಿವಾರಣೆಗಾಗಿ ಸುದರ್ಶನ ಮಂತ್ರ

ಜೀವನದಲ್ಲಿ ಕಡು ಕಷ್ಟಗಳು ಬಂದಾಗ ದತ್ತಾತ್ರೇಯರ ಈ ಮಂತ್ರ ಹೇಳಿ

ಮಂಗಳವಾರ ತಪ್ಪದೇ ಹನುಮತ್ ಪಂಚರತ್ನ ಸ್ತೋತ್ರ ಓದಿ

ಶಿವ ಶಂಕರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಶನಿ ದೋಷವಿರುವವರು ಇಂದು ಆಂಜನೇಯನ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments