Publish Date: Fri, 22 Jan 2021 (06:52 IST)
Updated Date: Fri, 22 Jan 2021 (06:53 IST)
ಬೆಂಗಳೂರು : ನಮ್ಮ ಎಲ್ಲಾ ವ್ಯವಹಾರಕ್ಕೆ ಸಹಿ ಬಹಳ ಮುಖ್ಯ. ಹಾಗಾಗಿ ನಮ್ಮ ಪರಿಪೂರ್ಣವಾದ ಸಹಿ ನಮ್ಮನ್ನು ಆರ್ಥಿಕವಾಗಿ ಬಲಪಡಿಸುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ತಪ್ಪಾದ ಸಹಿ ನಿಮಗೆ ನಷ್ಟವನ್ನು ತರುತ್ತದೆ. ಹಾಗಾಗಿ ಸರಿಯಾದ ರೀತಿಯಲ್ಲಿ ಸಹಿ ಮಾಡಿ ಅದೃಷ್ಟ ನಿಮ್ಮದಾಗಿಸಿಕೊಳ್ಳಿ.
ನೀವು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಮ್ಮ ಸಹಿಯನ್ನು ಬದಲಾಯಿಸಿ. ಇದರಿಂದ ನಿಮ್ಮ ಜೀವನದಲ್ಲಿ ಬಹಳ ಬದಲಾವಣೆ ಆಗುತ್ತದೆ. ನೀವು ಸಹಿ ಮಾಡುವಾಗ ನಿಮ್ಮ ಸಹಿಯ ಅಡಿಯಲ್ಲಿ ಒಂದು ಸರಳ ರೇಖೆಯನ್ನು ಎಳೆದು ಅದರ ಕೆಳಗೆ 2 ಚುಕ್ಕೆಗಳನ್ನು ಹಾಕಲು ಪ್ರಾರಂಭಿಸಿ. ನಿಮ್ಮ ಉಳಿತಾಯ ಹೆಚ್ಚಾದಂತೆ ಈ ಚುಕ್ಕೆಗಳ ಸಂಖ್ಯೆಯನ್ನು ಹೆಚ್ಚಿಸಿ. ಆದರೆ ಅದನ್ನು 6ಕ್ಕಿಂತ ಹೆಚ್ಚಿಸಬಾರದು.