Webdunia - Bharat's app for daily news and videos

Install App

ಇನ್ನೊಬ್ಬರಿಗೆ ಬಟ್ಟೆ ದಾನ ಮಾಡುವ ಮೊದಲು ಈ ವಿಚಾರ ನೆನಪಿರಲಿ

Krishnaveni K
ಶನಿವಾರ, 13 ಜುಲೈ 2024 (08:45 IST)
ಬೆಂಗಳೂರು: ದಾನ ಮಾಡುವುದು ಅತ್ಯಂತ ಶ್ರೇಷ್ಠ ಕೆಲಸ. ಅದರಲ್ಲೂ ನಿಮ್ಮಲ್ಲಿರುವ ಬಟ್ಟೆಯನ್ನು ಬಡವರಿಗೆ ದಾನ ಮಾಡಿದರೆ ಅದರಿಂದ ಅವರಿಗೆ ಅನುಕೂಲವಾಗುತ್ತದೆ. ಬಟ್ಟೆ ದಾನ ಮಾಡುವ ಮೊದಲು ಕೆಲವು ವಿಚಾರಗಳನ್ನು ನೀವು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

ದಾನ ಮಾಡುವುದು ಉತ್ತಮ ಕೆಲಸವೇ. ಆದರೆ ಅದನ್ನು ಸರಿಯಾದ ರೀತಿಯಲ್ಲಿ, ಸಮಯದಲ್ಲಿ ಮಾಡುವುದು ಅಷ್ಟೇ ಮುಖ್ಯ. ನಿಮ್ಮ ಬಟ್ಟೆಯನ್ನು ಇತರರಿಗೆ ದಾನ ಮಾಡುವಾಗ ಕೆಲವೊಂದು ತಪ್ಪು ಮಾಡಿದರೆ ಅದರಿಂದ ನಿಮಗೆ ಒಳಿತಲ್ಲ, ಕೆಡುಕಾಗುವ ಸಂಭವವೇ ಹೆಚ್ಚು ಎನ್ನುತ್ತದೆ ಶಾಸ್ತ್ರ. ಹಾಗಿದ್ದರೆ ಅದೇನು ಎಂದು ನೋಡೋಣ.

ಒಂದು ವೇಳೆ ನೀವು ಬಳಸಿದ ಬಟ್ಟೆಯನ್ನು ಇನ್ನೊಬ್ಬರಿಗೆ ದಾನ ಮಾಡುವುದಿದ್ದರೆ ಅದನ್ನು ತೊಳೆದು ಶುದ್ಧ ಮಾಡಿ ಕೊಡಿ. ತೊಳೆಯದ ಬಟ್ಟೆಯನ್ನು ದಾನ ಮಾಡುವುದರಿಂದ ನಿಮ್ಮಿಬ್ಬರ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಪರಸ್ಪರ ಟ್ರಾನ್ಫರ್ ಆಗುವ ಸಾಧ್ಯತೆಗಳಿವೆ.

ಉದಾಹರಣೆಗೆ ನಿಮಗಿರುವ ಸಂಕಟಗಳು, ರೋಗಗಳು ನೀವು ಬಟ್ಟೆ ದಾನವಾಗಿ ನೀಡುವ ವ್ಯಕ್ತಿಗೆ ವರ್ಗಾವಣೆಯಾಗಬಹುದು. ದಾನ ಮಾಡುವಾಗ ತೆಗೆದುಕೊಳ್ಳುವವನಿಗೆ ಯಾವುದೇ ಕೆಡುಕಾಗದಂತೆ ಶುದ್ಧ ಮನಸ್ಸಿನಿಂದ ನೀಡುವುದು ತುಂಬಾ ಮುಖ್ಯ. ಆಗಲೇ ದಾನದ ಫಲ ನಮಗೆ ಸಿಗುವುದು ಎನ್ನುತ್ತದೆ ಶಾಸ್ತ್ರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments