Publish Date: Sat, 08 Aug 2020 (07:21 IST)
Updated Date: Sat, 08 Aug 2020 (07:26 IST)
ಬೆಂಗಳೂರು : ಕೆಲವರ ಮನೆಯಲ್ಲಿ ಕೃಷ್ಣನ ವಿಗ್ರಹವನ್ನು ಇಟ್ಟು ಪೂಜೆ ಮಾಡುತ್ತಾರೆ. ಆದರೆ ಬೇರೆ ದೇವರಿಗಿಂತ ಭಿನ್ನವಾಗಿ ಈ ಕೃಷ್ಣನ ವಿಗ್ರಹವನ್ನು ಇಡಬೇಕಾಗುತ್ತದೆ. ಅದು ಹೇಗೆ ಎಂಬುದನ್ನ ತಿಳಿದುಕೊಳ್ಳಿ.
ಮನೆಯ ಪೂಜಾ ಕೋಣೆಯಲ್ಲಿ ಕೃಷ್ಣನ ವಿಗ್ರಹದ ಜೊತೆಗೆ ಆತನಿಗೆ ಪ್ರಿಯವಾದ ಕೊಳಲು, ನವಿಲುಗರಿ, ಗೋಮಾತೆ ಮೂರ್ತಿ, ವೈಜಯಂತಿ ಮಾಲಾ, ಚಂದನದಿಂದ ಮಾಡಿದ ಮಾಲೆ, ಕಮಲದ ಹೂವನ್ನು ಇಟ್ಟುಕೊಳ್ಳುವುದರಿಂದ ಕೃಷ್ಣನ ಅನುಗ್ರಹ ದೊರೆಯುತ್ತದೆ. ಹಾಗೇ ಕೃಷ್ಣನ ವಿಗ್ರಹಗಳು ಪಂಚಲೋಹ, ತಾಮ್ರದಲ್ಲಿದ್ದರೆ ತುಂಬಾ ಒಳ್ಳೆಯದು.