ಪತಿ ಪತ್ನಿಯರ ಕಲಹಕ್ಕೆ ಕಾರಣವಾಗುತ್ತೆ ಅಡುಗೆ ಮನೆಯಲ್ಲಿ ನೀವು ಮಾಡುವ ಈ ತಪ್ಪುಗಳು

ಗುರುವಾರ, 14 ನವೆಂಬರ್ 2019 (09:50 IST)
ಬೆಂಗಳೂರು : ಮನೆಯಲ್ಲಿ ಪತಿ ಪತ್ನಿಯರು ಅನೋನ್ಯವಾಗಿದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಆದರೆ ಅವರಿಬ್ಬರ ಜಗಳವಾದರೆ ಮನೆಯ ಶಾಂತಿ ಕದಡುತ್ತದೆ. ಇದಕ್ಕೆ ಕಾರಣ ಅಡುಗೆ ಮನೆಯಲ್ಲಿ ನೀವು ಮಾಡುವ ಕೆಲವು ತಪ್ಪುಗಳು.
ವಾಸ್ತುಶಾಸ್ತ್ರದ ಪ್ರಕಾರ ಸ್ನಾನ ಮಾಡದೆ ಮಹಿಳೆಯರು ಅಡುಗೆ ಕೆಲಸವನ್ನು ಮಾಡಬಾರದು. ಹಾಗೇ ನೈರುತ್ಯ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡಬಾರದು. ಇದು ಮನೆಯ ಸುಖ, ಶಾಂತಿಯನ್ನು ಹಾಳು ಮಾಡುತ್ತದೆ. ಇದರಿಂದ ಮನೆಯಲ್ಲಿ ಗಲಾಟೆ ನಡೆಯುತ್ತದೆ. ಅಲ್ಲದೇ ಉತ್ತರ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದರಿಂದ ನಷ್ಟ ಎದುರಾಗುತ್ತದೆ.


ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಶುಭಕರವೆಂದು ನಂಬಲಾಗಿದೆ. ಅಡುಗೆ ಮನೆಯ ಪೂರ್ವದಿಕ್ಕಿನಲ್ಲಿ ಒಂದು ಕಿಟಕಿ ಇರಬೇಕು. ಇದರಿಂದ ಹಾನಿಯಾಗುವುದು ತಪ್ಪುತ್ತದೆ. ಹಾಗೇ ಅಡುಗೆ ಮನೆ ಮುಂದೆ ಸ್ನಾನದ ಗೃಹ ಇರಬಾರದು. ಒಂದು ವೇಳೆ ಇದ್ದರೆ ಅದನ್ನು ಸದಾ ಮುಚ್ಚಿರಬೇಕು. ಹೀಗೆ ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಪತಿ ಪತ್ನಿಯರ ನಡುವೆ ಕಲಹ ನಡೆಯುವುದಿಲ್ಲ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ಪಂಚಾಂಗ ತಿಳಿಯಿರಿ