ಗುರುವಾರದಂದು ಈ ಮರಕ್ಕೆ ನೀರೆರೆದರೆ ಅಪಾರ ಸಂಪತ್ತಿನ ಒಡೆಯರಾಗುತ್ತೀರಿಯಂತೆ

ಭಾನುವಾರ, 30 ಡಿಸೆಂಬರ್ 2018 (07:26 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಗುರುವಾರದಂದು ವಿಷ್ಣು ದೇವನನ್ನು ಪೂಜಿಸಲಾಗುತ್ತದೆ. ವಿಷ್ಣುವಿನ ಮಡದಿ ಸಂಪತ್ತಿಗೆ ಅಧಿದೇವತೆಯಾದ ಶ್ರೀಲಕ್ಷ್ಮೀ. ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಲಕ್ಷ್ಮೀದೇವಿಯು ಒಲಿಯುತ್ತಾಳೆ ಎನ್ನಲಾಗಿದೆ.


ಹಾಗೇ ವಿಷ್ಣುವಿಗೆ ಹಳದಿ ಬಣ್ಣ ಅಧಿಕ ಪ್ರಿಯವಾದ್ದರಿಂದ ಗುರುವಾರದಂದು ವಿಷ್ಣುವಿಗೆ ಹಳದಿ ಬಣ್ಣದ ಹೂಗಳಿಂದ ಪೂಜೆ ಮಾಡಿ ಬೇಳೆಯನ್ನು ಅರ್ಪಿಸಿದರೆ ವಿಷ್ಣು ಸಂತುಷ್ಟನಾಗುತ್ತಾನೆ.


ಅಲ್ಲದೇ ಗುರುವಾರದಂದು ಬಾಳೆ ಮರದ ಪೂಜೆ ಮಾಡಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಬಾಳೆಮರಕ್ಕೆ ನೀರೆರೆದು ದೀಪವನ್ನು ಹಚ್ಚಿ ಪೂಜಿಸಿದರೆ ವಿಷ್ಣು ಹಾಗೂ ಲಕ್ಷ್ಮೀದೇವಿಗೆ ಕೃಪೆಗೆ ಪಾತ್ರರಾಗುತ್ತಿರಿ. ಅಪಾರ ಸಂಪತ್ತನ್ನು ಹೊಂದುತ್ತೀರಿ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?