ಬೆಂಗಳೂರು : ಮಹಿಳೆಯರು ಹೆಚ್ಚಾಗಿ ತಮಗಿಷ್ಟವಾದ ಬಳೆಗಳನ್ನು ಧರಿಸುತ್ತಾರೆ. ಆದರೆ ಈ ಬಣ್ಣದ ಬಳೆಗಳನ್ನು ಧರಿಸಿದರೆ ಮನೆಯಲ್ಲಿಶಾಂತಿ ನೆಮ್ಮದಿ ಇರುವುದಿಲ್ಲ. ಕಲಹಗಳು ನಡೆಯುತ್ತಿರುತ್ತದೆ. ಪತಿಗೆ ಏಳಿಗೆಯಾಗುವುದಿಲ್ಲ. ಆ ಬಳೆಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
ಕೈಗಳಿಗೆ ತಪ್ಪದೇ ಗಾಜಿನ ಬಳೆಗಳನ್ನು ಧರಿಸಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಕಪ್ಪು, ನೀಲಿ, ಗ್ರೇ ಬಣ್ಣದ ಗಾಜಿನ ಬಳೆಗಳನ್ನು ಧರಿಸಬಾರದು. ಇದರಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಕಪ್ಪು ಬಳೆಯನ್ನು ನಿತ್ಯ ಬಳಸಬಾರದು. ಹಳದಿ, ಕೆಂಪು, ಹಸಿರು ಬಣ್ಣದ ಬಳೆಗಳನ್ನು ಧರಿಸಿದರೆ ತುಂಬಾ ಉತ್ತಮ.