Webdunia - Bharat's app for daily news and videos

Install App

Horoscope 2025: ವೃಷಭ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕ ಸಂಭದದಲ್ಲಿ ಏನಾಗಲಿದೆ ನೋಡಿ

Krishnaveni K
ಸೋಮವಾರ, 25 ನವೆಂಬರ್ 2024 (08:47 IST)
ಬೆಂಗಳೂರು: ವೃಷಭ ರಾಶಿಯವರಿಗೆ 2025 ರ ವರ್ಷ ಕೌಟುಂಬಿಕ ವಿಚಾರದಲ್ಲಿ ಇದುವರೆಗಿದ್ದ ಮನಸ್ತಾಪಗಳು ದೂರವಾಗಿ ನೆಮ್ಮದಿ ಕಂಡುಬರಲಿದೆ. ಈ ವರ್ಷದ ನಿಮ್ಮ ಕೌಟುಂಬಿಕ ಭವಿಷ್ಯ ಏನಾಗಲಿದೆ ಎಂಬ ವಿವರ ಇಲ್ಲಿದೆ.

ವೃಷಭ ರಾಶಿಯವರಿಗೆ ಈ ವರ್ಷದ ಆರಂಭದಲ್ಲಿ ಸ್ವಲ್ಪ ಕಠಿಣ ಸನ್ನಿವೇಶಗಳು ಎದುರಾದೀತು. ಮಕ್ಕಳು ನಿಮ್ಮ ಮಾತು ಕೇಳದೇ ಇರಬಹುದು. ಆರ್ಥಿಕವಾಗಿಯೂ ಸಂಕಷ್ಟ ಎದುರಿಸಬೇಕಾದೀತು. ಇದರಿಂದ ಕುಟುಂಬದಲ್ಲಿ ಮನಸ್ತಾಪಗಳು ಮೂಡಿಬರಲಿವೆ.

ಆದರೆ ಮೇ ತಿಂಗಳ ಬಳಿಕ ಪರಿಸ್ಥಿತಿ ಸುಧಾರಿಸುವುದು. ಮಕ್ಕಳು ನಿಮ್ಮ ಮಾತು ಕೇಳುವಂತಾಗಲಿದೆ. ಕೌಟುಂಬಿಕವಾಗಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ಆರ್ಥಿಕವಾಗಿಯೂ ಸುಧಾರಣೆ ಕಂಡುಬರುವುದು. 

ವರ್ಷಾಂತ್ಯಕ್ಕೆ ಬರುತ್ತಿದ್ದಂತೇ ಕೌಟುಂಬಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ. ನಿಮ್ಮ ಕಷ್ಟಗಳಿಗೆ ಕುಟುಂಬದವರು ಹೆಗಲುಕೊಡಲಿದ್ದಾರೆ. ಮಕ್ಕಳಿಂದ ಶುಭ ವಾರ್ತೆ ನಿರೀಕ್ಷಿಸಬಹುದು. ಯಾವುದೇ ವಿಚಾರವಾಗಿದ್ದರೂ ಕುಟುಂಬದವರೊಂದಿಗೆ ಚರ್ಚಿಸಿ ಮುನ್ನಡೆಯಲಿದ್ದೀರಿ.

ಇನ್ನು, ಪ್ರೀತಿ, ಪ್ರೇಮದ ವಿಚಾರದಲ್ಲಿ ಈ ವರ್ಷ ಉತ್ತಮ ಫಲ ಕಾಣುವಿರಿ. ವರ್ಷಾರಂಭದಲ್ಲಿ ನಿಮ್ಮ ಸಂಗಾತಿಯನ್ನು ಕಂಡುಕೊಳ್ಳಲಿದ್ಧೀರಿ. ವರ್ಷಾಂತ್ಯದ ವೇಳೆ ನಿಮ್ಮ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

ಶನಿದೋಷದಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಶನಿ ಚಾಲೀಸಾ ಓದಿ

ಲಕ್ಷ್ಮೀ ದೇವಿ ಒಲಿಯಬೇಕೆಂದರೆ ಈ ಸ್ತೋತ್ರವನ್ನು ಓದಿ

ಇಂದು ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಓದಿದ್ದು ನೆನಪಿನಲ್ಲಿ ಉಳಿಯಬೇಕೆಂದರೆ ಈ ಮಂತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments