Webdunia - Bharat's app for daily news and videos

Install App

Horoscope 2025: ಮೇಷ ರಾಶಿಯವರಿಗೆ 2025 ರಲ್ಲಿ ಕುಟುಂಬ ಜೀವನ ಹೇಗಿರಲಿದೆ

Krishnaveni K
ಸೋಮವಾರ, 25 ನವೆಂಬರ್ 2024 (08:43 IST)
ಬೆಂಗಳೂರು: ಮೇಷ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ, ಆರ್ಥಿಕವಾಗಿ ಸೇರಿದಂತೆ ಒಟ್ಟಾರೆ ಜೀವನ ಹೇಗಿರಲಿದೆ ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.

ಮೇಷ ರಾಶಿಯವರಿಗೆ ಈ ವರ್ಷ ಬೆಳವಣಿಗೆ, ಅಭಿವೃದ್ಧಿ ಮತ್ತು ಉನ್ನತಿಗೇರುವ ಯೋಗದ ವರ್ಷ. ಈ ವರ್ಷ ಕುಟುಂಬ ಸದಸ್ಯರೊಂದಿಗೆ ನಿಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ದಾಂಪತ್ಯದಲ್ಲಿ ಸುಂದರ ದಿನಗಳು ನಿಮ್ಮ ಎದುರಿಗಿದೆ.

ಹೊಸದಾಗಿ ಮದುವೆ, ಪ್ರೇಮ ಸಂಬಂಧ ಮಾಡಲು ಬಯಸುವವರಿಗೆ ಸೂಕ್ತ ಸಂಗಾತಿ ಸಿಗಲಿದ್ದಾರೆ. ಆರ್ಥಿಕವಾಗಿ ಅಭಿವೃದ್ಧಿಯಿರುವುದರಿಂದ ಕುಟುಂಬಕ್ಕೆ ಸಂಬಂಧಪಟ್ಟಂತೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಚಿಂತನೆ ನಡೆಸುತ್ತೀರಿ.

ವಾಹನ ಖರೀದಿಗೆ ಯೋಗವಿದ್ದರೂ ಮತ್ತೆ ನಿಮ್ಮ ಉದಾಸೀನ ಪ್ರವೃತ್ತಿ ಮುಂದುವರಿಯಲಿದೆ. ವರ್ಷಾರಂಭದಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳಿದ್ದರೂ ಮೇ-ಜೂನ್ ವರೆಗಿನ ಅವಧಿಯಲ್ಲಿ ಪರಿಹಾರವಾಗಲಿದೆ.

ವರ್ಷದ ಮಧ್ಯಾವಧಿಯಲ್ಲಿ ಕೆಲವೊಂದು ಒತ್ತಡದ ಸನ್ನಿವೇಶಗಳು ಎದುರಾದೀತು. ವರ್ಷಾಂತ್ಯದಲ್ಲಿ ನಿಮ್ಮ ಕುಟುಂಬದ ಹಿರಿಯ ಸದಸ್ಯರ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದರೆ ಗುರುವಿನ ಅನುಗ್ರಹದಿಂದ ಏನೇ ಬಂದರೂ ಕುಟುಂಬದಲ್ಲಿ ಒಗ್ಗಟ್ಟು, ಪರಸ್ಪರ ಸಹಕಾರವಿರಲಿದ್ದು ಸಮಸ್ಯೆಗಳನ್ನು ಎದುರಿಸುವಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ನಾಗದೋಷ ಪರಿಹಾರಕ್ಕಾಗಿ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments