Webdunia - Bharat's app for daily news and videos

Install App

Horoscope 2025: ಮೀನ ರಾಶಿಯವರಿಗೆ 2025 ರಲ್ಲಿ ಉದ್ಯೋಗದಲ್ಲಿ ಯಶಸ್ಸಿಗೆ ಕಾಯಬೇಕು

Krishnaveni K
ಬುಧವಾರ, 20 ನವೆಂಬರ್ 2024 (10:32 IST)
ಬೆಂಗಳೂರು: ಮೀನ ರಾಶಿಯವರಿಗೆ 2025 ರಲ್ಲಿ ಉದ್ಯೋಗ ವಿಚಾರದಲ್ಲಿ ಮೊದಲು ಬೀಳು ಮತ್ತೆ ಏಳುವ ಯೋಗ ಎನ್ನಬಹುದು. ಕಷ್ಟ ಬಂದ ಮೇಲೆ ಸುಖ ಇದ್ದೇ ಇರುತ್ತದೆ ಎನ್ನುವುದಕ್ಕೆ ಅವರ ಈ ವರ್ಷದ ಉದ್ಯೋಗ ಭವಿಷ್ಯವೇ ಸಾಕ್ಷಿ.

ಮೀನ ರಾಶಿಯವರು ಸಾಮಾನ್ಯವಾಗಿ ಇತರರಿಗೆ ಸಹಾಯ ಮಾಡುವ ಮನಸ್ಸುಳ್ಳವರು. ಈ ರಾಶಿಯವರು ನರ್ಸ್, ಸಾಮಾಜಿಕ ಸೇವೆ, ಮಧ್ಯವರ್ತಿಗಳು ಇತ್ಯಾದಿ ಕ್ಷೇತ್ರಕ್ಕೆ ಸಂಬಂಧಪಟ್ಟ ಉದ್ಯೋಗದಲ್ಲಿ ಯಶಸ್ಸು ಸಾಧಿಸುತ್ತಾರೆ.

ಮೀನ ರಾಶಿಯವರಿಗೆ ವರ್ಷದ ಆರಂಭ ಅಷ್ಟೊಂದು ಚೆನ್ನಾಗಿರುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ನಾನಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಶನಿಯ ದೆಸೆಯಿಂದ ಕಷ್ಟಗಳು ಎದುರಾದೀತು. ಹೀಗಾಗಿ ತಮ್ಮನ್ನು ತಾವು ಅವಲೋಕಿಸಿಕೊಳ್ಳಲು ಇದು ಸಕಾಲವಾಗಿದೆ.

ಆದರೆ ನಂತರದ ಅವಧಿಯಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಚೇತರಿಕೆ ಕಂಡುಬರುವುದು. ನಿಮ್ಮ ಕಷ್ಟಕ್ಕೆ ಸಹಾಯಕ್ಕೆ ಬರುವವರು ಇರುತ್ತಾರೆ. ಆರಂಭದಲ್ಲಿದ್ದ ಆರ್ಥಿಕ ಸಂಕಷ್ಟಗಳು ನಿಧಾನವಾಗಿ ದೂರವಾಗುವುದು. ಆದರೆ ಕೆಲಸದ ವಿಚಾರದಲ್ಲಿ ನಿಮಗಿರುವ ಬದ್ಧತೆಯೇ ನಿಮ್ಮನ್ನು ಕಾಪಾಡಲಿದೆ. ಜೂನ್ ಬಳಿಕ ಕೆಲಸದ ಸ್ಥಳದಲ್ಲಿ ಎಲ್ಲರೂ ತಿರುಗಿ ನೋಡುವಂತೆ ಸಾಧನೆ ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅನಿವಾರ್ಯತೆ ಇತರರಿಗೂ ಅರ್ಥವಾಗಲಿದೆ.

ಆಗಸ್ಟ್ ನಲ್ಲಿ ಸ್ವಲ್ಪ ಕೆಲಸದ ಅಭದ್ರತೆ ಕಾಡಿದರೂ ಸರಿದೂಗಿಸಿಕೊಂಡು ಹೋಗಲಿದ್ದೀರಿ. ಅಕ್ಟೋಬರ್ ನಲ್ಲಿ ಹೊಸ ಅವಕಾಶಗಳು ನಿಮಗಾಗಿ ತೆರೆದುಕೊಳ್ಳಲಿದೆ. ವರ್ಷಾಂತ್ಯದಲ್ಲಿ ಔದ್ಯೋಗಿಕವಾಗಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರಲಿದೆ.

ಈ ರಾಶಿಯವರ ಅದೃಷ್ಟ ಸಂಖ್ಯೆ: 3 ಮತ್ತು 7.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

ಮುಂದಿನ ಸುದ್ದಿ
Show comments