Webdunia - Bharat's app for daily news and videos

Install App

Horoscope 2025: ಕುಂಭ ರಾಶಿಯವರು 2025 ರಲ್ಲಿ ಉದ್ಯೋಗದಲ್ಲಿ ಅಂದುಕೊಂಡಷ್ಟು ಸುಲಭವಲ್ಲ

Krishnaveni K
ಬುಧವಾರ, 20 ನವೆಂಬರ್ 2024 (10:27 IST)
ಬೆಂಗಳೂರು: ಕುಂಭ ರಾಶಿಯವರಿಗೆ 2025 ನೇ ವರ್ಷದಲ್ಲಿ ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಸವಾಲುಗಳಿದ್ದರೂ ಯಶಸ್ಸು ಪಡೆಯುವ ಅವಕಾಶಗಳಿರುತ್ತವೆ. ಅವರ ಉದ್ಯೋಗ ಫಲ ಇಲ್ಲಿದೆ ನೋಡಿ.

ಕುಂಭ ರಾಶಿಯವರು ಎನ್ ಜಿಒ, ಸಾಮಾಜಿಕ ಕೆಲಸಗಳು, ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಈ ರಾಶಿಯವರಿಗೆ ಈ ವರ್ಷ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಫಲಗಳನ್ನು ಕಾಣಲಿದ್ದಾರೆ. ಈ ರಾಶಿಯವರ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗಲಿದೆ.

ಶುಕ್ರನ ಅನುಗ್ರಹದಿಂದ ಉದ್ಯೋಗ ಕ್ಷೇತ್ರದಲ್ಲಿ ನಿಮಗೆ ಯಶಸ್ಸಿನ ಜೊತೆಗೆ ಕೀರ್ತಿಯೂ ಸಿಗಲಿದೆ. ಇದರ ಜೊತಗೆ ಗುರುವಿನ ಅನುಗ್ರಹವೂ ಇರುವುದರಿಂದ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ವರ್ಷಾರಂಭದಲ್ಲಿ ಕೆಲವು ಕಷ್ಟಗಳನ್ನು ಅನುಭವಿಸಬೇಕಾದೀತು.

ವರ್ಷಾರಂಭದಲ್ಲಿ ಸಹೋದ್ಯೋಗಿಗಳಿಂದಲೇ ತೊಂದರೆ, ಅಡೆತಡೆಗಳು ಎದುರಾದೀತು. ನಿಮ್ಮ ಕೆಲಸದ ವಾತಾವರಣದಲ್ಲಿ ಸ್ವಲ್ಪ ಉಸಿರುಗಟ್ಟುವಂತೆ ಆಗಬಹುದು. ಹಿತಶತ್ರುಗಳಿಂದ ತೊಂದರೆಗಳು ಎದುರಾದೀತು. ಹೀಗಾಗಿ ವರ್ಷಾರಂಭದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಮೇಲಿನ ಅಧಿಕಾರಿಗಳಿಂದಲೂ ಕಿರಿ ಕಿರಿ ಕಂಡುಬರಲಿದೆ.

ಆದರೆ ವರ್ಷದ ದ್ವಿತೀಯಾರ್ಧದಲ್ಲಿ ಉತ್ತಮ ಫಲಗಳನ್ನು ಕಾಣಲಿದ್ದೀರಿ. ನಿಮ್ಮದೇ ಸ್ವಸಾಮರ್ಥ್ಯದಿಂದ ಏಳಿಗೆ ಕಂಡುಬರಲಿದೆ. ಬೇರೆಯವರ ಅಧೀನದಲ್ಲಿರುವ ಅಗತ್ಯ ಬರುವುದಿಲ್ಲ. ಸಕಾರಾತ್ಮಕ ಬದಲಾವಣೆಗಳು ಕಂಡುಬರುವುದು. ಎಲ್ಲದಕ್ಕೂ ನಿಮ್ಮ ಪರಿಶ್ರಮವೇ ಉತ್ತರವಾಗಲಿದೆ.

ಈ ರಾಶಿಯವರ ಅದೃಷ್ಟ ಸಂಖ್ಯೆ: 11, 29

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Narasimhastakam: ನರಸಿಂಹಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Durga Mantra: ದುರ್ಗಾ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva mantra: ಇಂದು ಶಿವ ಅಷ್ಟೋತ್ತರ ತಪ್ಪದೇ ಓದಿ

Surya Mantra: ಇಂದು ಸೂರ್ಯನ ಕುರಿತಾದ ಈ ಸ್ತೋತ್ರವನ್ನು ತಪ್ಪದೇ ಓದಿ

Anjaneya Mantra: ಶನಿದೋಷವಿದ್ದವರು ಆಂಜನೇಯನ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments