Select Your Language

Notifications

webdunia
webdunia
webdunia
webdunia

ಈ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಮನೆಗೆ ಅಶುಭ

ಈ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಮನೆಗೆ ಅಶುಭ
ಬೆಂಗಳೂರು , ಬುಧವಾರ, 13 ಡಿಸೆಂಬರ್ 2017 (06:57 IST)
ಬೆಂಗಳೂರು: ನಮ್ಮ ಹಿಂದು ಶಾಸ್ತ್ರ ಪೂಜೆಗೆ ಬಳಸುವ ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಅದು ಪೂಜೆಗೆ ಅರ್ಹವಲ್ಲಎಂದು ಹೇಳುತ್ತದೆ. ಹಾಗೆಯೇ ಅದರ  ಜೊತೆ ಈ ವಸ್ತುಗಳನ್ನು ಯಾವ ಸಂದರ್ಭದಲ್ಲಿಯು ನೆಲದ ಮೇಲೆ ಇಡಬಾರದು. ಒಂದು ವೇಳೆ ಇಟ್ಟರೆ ಅಲ್ಲಿ ಅಶುಭ ಉಂಟಾಗಿ ದಾರಿದ್ಯ ಮನೆ ಮಾಡುತ್ತದೆ.


ಮೊದಲನೆಯದಾಗಿ ಶಿವಲಿಂಗವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಹೀಗೆ ಇಟ್ಟರೆ ತುಂಬಾ ಸಮಸ್ಯೆಗಳು ಎದುರಾಗುತ್ತದೆ. ಅದನ್ನು ಮಣೆಯ ಮೇಲೆ ಇಡಬೇಕು. ಎರಡನೇಯದಾಗಿ ದೀಪವನ್ನು ಹಚ್ಚಿ ನೆಲದ ಮೇಲೆ ಇಡಬಾರದು. ಇದರಿಂದ ದೇವರಿಗೆ ಅವಮಾನವಾಗುತ್ತದೆ ಎಂದು ಹೇಳುತ್ತಾರೆ. ಮೂರನೇಯದಾಗಿ ಹಿಂದೂ ಸಂಪ್ರದಾಯದಲ್ಲಿ ಜನೀವಾರವನ್ನು ಹಾಕುವ ಪದ್ಧತಿ ಇದೆ. ಜನೀವಾರವನ್ನು ನೆಲದ ಮೆಲೆ ಇಡಬಾರದು. ಒಂದು ವೇಳೆ ಇಟ್ಟರೆ ತಂದೆ, ತಾಯಿ ಹಾಗು ಗುರುವಿಗೆ  ಅವಮಾನ ಮಾಡಿದಂತೆ ಎಂದು ಹೇಳುತ್ತಾರೆ.


ನಾಲ್ಕನೇಯದಾಗಿ ಶಂಖದಲ್ಲಿ ಲಕ್ಷ್ಮೀದೇವಿ ನೆಲೆಸಿರುವುದರಿಂದ  ಅದನ್ನು ನೆಲದ ಮೇಲೆ ಇಡಬಾರದು. ಇಟ್ಟರೆ ಲಕ್ಷ್ಮೀ ಕೋಪಗೊಂಡು ಮನೆಯಿಂದ ಹೊರಟು ಹೋಗುತ್ತಾಳೆ ಎನ್ನುತ್ತಾರೆ. ಐದನೇಯದಾಗಿ ಬಂಗಾರವನ್ನು ನೆಲದಮೇಲೆ ಇಡಬಾರದು. ಬಂಗಾರವೆನ್ನುವುದು ಲಕ್ಷ್ಮೀಯ ಸ್ವರೂಪವಾದ್ದರಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿಗೆ ಈ ವಸ್ತುವನ್ನುತಿನ್ನಿಸುವುದರಿಂದ ನಿಮ್ಮನ್ನು ಅದೃಷ್ಟ ಹುಡುಕಿಕೊಂಡು ಬರುತ್ತದೆ