ಉತ್ತಮ ಸಂಗಾತಿಯನ್ನು ಪಡೆಯಲು ಈ ದಾನ ಮಾಡಿ

Webdunia
ಭಾನುವಾರ, 3 ಫೆಬ್ರವರಿ 2019 (07:32 IST)
ಬೆಂಗಳೂರು : ಜೀವನದಲ್ಲಿ ಮದುವೆಯಾಗುವುದು ಒಂದೇ ಬಾರಿ. ಆದ್ದರಿಂದ ಸುಂದರವಾದ, ಒಳ್ಳೆಯ ಗುಣವಿರುವಂತಹ  ಸಂಗಾತಿ ಬೇಕು ಎಂದು ಎಲ್ಲರೂ ಬಯಸುತ್ತಾರೆ. ಅಂತವರು ಈ ಒಂದು ಅದ್ಭುತವಾದ ದಾನ ಮಾಡಿದರೆ ಒಳ್ಳೆಯ ಸಂಗಾತಿಯ ಪ್ರಾಪ್ತಿಯೋಗ ನಿಮ್ಮದಾಗುತ್ತದೆ.


ಜೀವನದಲ್ಲಿ ಒಳ್ಳೆಯ ಗುಣವಿರುವ ಸುಂದರವಾದ ಸಂಗಾತಿ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಪೂರ್ವಜನ್ಮದ ಪುಣ್ಯವಿರಬೇಕು. ಗಂಡಿನ ಜಾತಕದಲ್ಲಿ ಶುಕ್ರಗ್ರಹದ ಸ್ಥಾನ ಚೆನ್ನಾಗಿದ್ದರೆ ಅವರಿಗೆ  ಒಳ್ಳೆಯ ಗುಣವಿರುವ ಸುಂದರವಾದ ಹೆಂಡತಿಯ ಜೊತೆಗೆ ಸಂಪತ್ತು, ವೈಭೋಗ ಲಭಿಸುತ್ತದೆ.


ಹೆಣ್ಣಿನ ಜಾತಕದಲ್ಲಿ ಕುಜ ಸ್ಥಾನವನ್ನು ನೋಡುತ್ತಾರೆ. ಅದರಲ್ಲಿ ಕುಜದೋಷವಿದ್ದರೆ ದಡ್ಡ ಗಂಡ ಸಿಗುತ್ತಾನೆ ಎಂದರ್ಥ. ಅಂತವರು ಈ ಕುಜ ದೋಷ ಪರಿಹಾರವಾಗಿ ಒಳ್ಳೆಯ ಗಂಡ ಸಿಗಬೇಕೆಂದರೆ ಈ ಒಂದು ಅದ್ಭುತವಾದ ದಾನ ಮಾಡಿ.


ರೋಹಿಣಿ ನಕ್ಷತ್ರವು ಏಕಾದಶಿ ಅಥವಾ ಅಷ್ಟಮಿಯಲ್ಲಿ  ಶುಕ್ರವಾರದಂದು ಬಂದ ಸಂದರ್ಭದಲ್ಲಿ ಶ್ರೀಕೃಷ್ಣನ ದೇವಾಲಯಕ್ಕೆ ಹೋಗಿ ಸುಗಂಧಭರಿತವಾದ ಪುಷ್ಪವನ್ನು ದೇವರಿಗೆ ಅರ್ಪಿಸಿ 5 ಜನ ಮುತ್ತೈದೆಯರಿಗೆ ತಾಂಬೂಲ ಕೊಟ್ಟು ಆಶೀರ್ವಾದ ತೆಗೆದುಕೊಂಡರೆ ಒಳ್ಳೆಯ ಸಂಗಾತಿಯ ಪ್ರಾಪ್ತಿಯೋಗ ನಿಮ್ಮದಾಗುತ್ತದೆ. ಈ ಪರಿಹಾರವನ್ನು 8 ಶುಕ್ರವಾರ ಮಾಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ತಪ್ಪದೇ ಅಷ್ಟಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಶ್ರಾದ್ಧದ ದಿನ ಅನ್ನದಾನ ಮತ್ತು ಪಿಂಡ ಇಡುವುದು ಯಾಕೆ

ಅಚ್ಯುತಾಷ್ಟಕಂ ಇಂದು ತಪ್ಪದೇ ಓದಿ ಕನ್ನಡದಲ್ಲಿ ಇಲ್ಲಿದೆ

ಮಕ್ಕಳಿಗೆ ಹೇಳಿಸಬಹುದಾದ ಚಿಕ್ಕ ಮತ್ತು ಅರ್ಥಪೂರ್ಣ ಶಾರದಾ ಸ್ತೋತ್ರ

ಬುಧವಾರದಂದು ವಿಘ್ನ ವಿನಾಶಕನಿಗೆ ವಿಶೇಷ ಪೂಜೆ ಮಾಡಿದ್ರೆ ಏನ್ ಫಲ ಗೊತ್ತಾ

ಮುಂದಿನ ಸುದ್ದಿ
Show comments