Publish Date: Tue, 21 Apr 2020 (09:15 IST)
Updated Date: Tue, 21 Apr 2020 (09:18 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ ದೋಷ ಪರಿಹಾರವಾಗುತ್ತದೆ.
ಮೇಷ ರಾಶಿಯವರಿಗೆ ಶನಿ ಹಾಗೂ ಬುಧ ದೋಷಕಾರಕ, ಹಾಗೇ ಗುರು ನಿಮಗೆ ಭಾಗ್ಯಕಾರಕ. ಮೇಷ ರಾಶಿಯವರು ಅಕ್ಷಯ ತೃತೀಯ ದಿನದಂದು ಮಂಗಳಮುಖಿಯರಿಗೆ ಹೂ, ಅರಶಿನ, ಕುಂಕುಮ, ಬಳೆ, ಬಟ್ಟೆಯನ್ನು ಕೊಟ್ಟರೆ ತುಂಬಾ ಒಳ್ಳೆಯದು. ಹಾಗೇ ತಾಯಿ-ತಂದೆಯ ಅಕ್ಕತಂಗಿಯರಿಗೆ ಈ ದಾನವನ್ನು ನೀಡಬೇಕು. ಅಥವಾ ಅಕ್ಕತಂಗಿಯ ಹೆಣ್ಣು ಮಕ್ಕಳಿಗೆ ಬೆಳ್ಳಿ ವಸ್ತುವನ್ನು ದಾನ ಮಾಡಬೇಕು. ಇದರಿಂದ ಲಕ್ಷ್ಮೀ ಸದಾ ಕಾಲ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ.