Publish Date: Sun, 05 Jul 2020 (07:46 IST)
Updated Date: Sun, 05 Jul 2020 (07:48 IST)
ಬೆಂಗಳೂರು : ಸಾಮಾನ್ಯವಾಗಿ ಮನೆಯಲ್ಲಿ ಇರುವೆಗಳು ಓಡಾಡುತ್ತಿರುತ್ತವೆ. ಅದೇ ಇರುವೆಗಳು ಮನೆಯಲ್ಲಿರುವ ಈ ವಸ್ತುಗಳ ಮೇಲೆ ಮುತ್ತಿದರೆ ಯಾವುದರ ಸೂಚನೆ ಎಂಬುದನ್ನು ತಿಳಿದುಕೊಳ್ಳಿ.
ಇರುವೆಗಳು ಮನೆಯ ಮೇಲ್ಚಾವಣೆಯ ಮೇಲೆ ಓಡಾಡಿದರೆ ಅತಿ ಶೀಘ್ರದಲ್ಲಿ ನಿಮಗೆ ಸಂತೋಷ ಪ್ರಾಪ್ತಿಯಾಗುತ್ತದೆ. ಇರುವೆಗಳು ಅಕ್ಕಿಯ ಡಬ್ಬಕ್ಕೆ ಮುತ್ತಿಗೆ ಹಾಕಿದರೆ ಮನೆಯಲ್ಲಿ ಧನವೃದ್ಧಿಯಾಗುತ್ತದೆ. ಅದೇ ಮನೆಯಲ್ಲಿರುವ ತುಪ್ಪದ ಡಬ್ಬಿಗೆ ಮುತ್ತಿದರೆ ನಿಮ್ಮ ಸಂಪತ್ತು ನಾಶವಾಗುತ್ತದೆ ಎಂದರ್ಥ. ಮನೆಯಲ್ಲಿ ಅತಿಯಾಗಿ ಕೆಂಪು ಇರುವೆ ಕಾಣಿಸಿದರೆ ಕಳ್ಳತನವಾಗಯತ್ತದೆ ಎಂದರ್ಥ. ಆಭರಣಗಳಿಗೆ ಇರುವೆ ಮುತ್ತಿದರೆ ಚಿನ್ನ,ಹಣ ವೃದ್ಧಿಯಾಗುತ್ತದೆ ಎಂಬ ಸೂಚನೆ.