Webdunia - Bharat's app for daily news and videos

Install App

ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಈ ಕೆಲಸಗಳನ್ನು ಮಾಡಿ

Krishnaveni K
ಮಂಗಳವಾರ, 13 ಆಗಸ್ಟ್ 2024 (08:37 IST)
ಬೆಂಗಳೂರು: ಶ್ರಾವಣ ಮಾಸದಲ್ಲಿ ಶಿವನ ಆರಾಧನೆ ಮಾಡುವುದು ಮಖ್ಯವಾಗಿದೆ. ಇದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ದೂರವಾಗಿ ನೆಮ್ಮದಿ ಕಾಣುತ್ತೇವೆ ಎಂಬ ನಂಬಿಕೆಯಿದೆ. ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಏನು ಮಾಡಬೇಕು ನೋಡಿ.

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಇದೇ ಕಾರಣಕ್ಕೆ ಈ ಮಾಸವನ್ನು ಪವಿತ್ರ ಮಾಸ ಎಂದು ಕರೆಯುತ್ತೇವೆ. ಶುಭ ಕಾರ್ಯಗಳನ್ನು ನಡೆಸಲು ಇದು ಪ್ರಶಸ್ತವಾದ ಮಾಸವಾಗಿದೆ. ಶ್ರಾವಣ ಮಾಸದಲ್ಲಿ ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಭಕ್ತಿಯಿಂದ ಶಿವನ ಪೂಜೆ ಮಾಡುವುದರಿಂದ ಶಿವನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಲಿದ್ದೀರಿ.

ಪ್ರತೀ ಶ್ರಾವಣ ಸೋಮವಾರಗಳಂದು ಶಿವನಿಗೆ ದೀಪ ಬೆಳಗಿದರೆ ಹಲವು ದೋಷ ಪರಿಹಾರವಾಗಬಹುದಾಗಿದೆ. ಈ ತಿಂಗಳಲ್ಲಿ ಇತರರಿಗೆ ನಿಂದಿಸುವುದು, ಕೆಡುಕು ಮಾಡುವುದು, ತಾಮಸ ಆಹಾರ ಸೇವನೆ ಮಾಡುವುದನ್ನು ಮಾಡದೇ ದೇವರ ಆರಾಧನೆಯಲ್ಲಿ ತೊಡಗುವುದರಿಂದ ಶಿವನ ಕೃಪೆಗೆ ಪಾತ್ರರಾಗುತ್ತೀರಿ.

ಶ್ರಾವಣ ಮಾಸದಲ್ಲಿ ಬದನೆಯಂತಹ ಅಶುದ್ಧ ವರ್ಗಕ್ಕೆ ಸೇರಿದ ತರಕಾರಿಗಳನ್ನು ಬಳಸಬೇಡಿ. ಮಾಂಸಾಹಾರ ಸೇವನೆಯೂ ಮಾಡದೇ ಸಾತ್ವಿಕ ಆಹಾರದ ಮೂಲಕ ಶಿವನ ಆರಾಧನೆ ಮಾಡಿ. ಸೋಮವಾರದಂದು ಉಪವಾಸವಿದ್ದು ಶಿವನ ಆರಾಧನೆ ಮಾಡಿದರೆ ಮತ್ತಷ್ಟು ಉತ್ತಮ ಫಲಗಳನ್ನು ಕಾಣಬಹುದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Dasha 2025: ಕರ್ಕಟಕ ರಾಶಿಯವರಿಗೆ 2025 ರಲ್ಲಿ ಶನಿಯಿಂದ ಈ ಲಾಭಗಳಾಗುತ್ತವೆ

Shani dosha horoscope 2025: ಮೇಷ ರಾಶಿಯವರಿಗೆ 2025 ರಲ್ಲಿ ಶನಿ ದೆಸೆ ಇದೆಯೇ

Baba Vanga prediction: ಬಾಬಾ ವಂಗಾ ಪ್ರಕಾರ 2025 ರಲ್ಲಿ ಈ ರಾಶಿಯವರಿಗೆ ಶನಿ ಅದೃಷ್ಟ ತರುತ್ತಾನೆ

Family horoscope 2025: ಮೀನ ರಾಶಿಯವರು 2025 ರಲ್ಲಿ ಕೌಟುಂಬಿಕವಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದೀರಿ

Family horoscope 2025: ಕುಂಭ ರಾಶಿಯವರಿಗೆ 2025 ರಲ್ಲಿ ಕೌಟುಂಬಿಕವಾಗಿ ಭವಿಷ್ಯ ಹೇಗಿರಲಿದೆ

ಮುಂದಿನ ಸುದ್ದಿ
Show comments