ಬೆಂಗಳೂರು : ಮನುಷ್ಯನಿಗೆ ಕಷ್ಟಗಳು ಬರುವುದು ಸಹಜ. ಆದರೆ ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಈ ವಸ್ತುಗಳನ್ನು ಮನೆಯಿಂದ ಹೊರಗೆ ನೀಡಿದರೆ ಮಾತ್ರ ನಿಮಗೆ ಕಷ್ಟದ ಮೇಲೆ ಕಷ್ಟದ ಮಳೆ ಸುರಿಯುವುದು ಖಂಡಿತ. ಆದಕಾರಣ ಅದು ಏನೇಂಬುದನ್ನು ಮೊದಲು ತಿಳಿದುಕೊಳ್ಳಿ.
ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಹಣವನ್ನು ಬೇರೆಯವರಿಗೆ ಸಾಲದ ರೂಪದಲ್ಲಿ ನೀಡಬಾರದು. ಇದರಿಂದ ಲಕ್ಷ್ಮೀದೇವಿ ನಿಮ್ಮನ್ನ ಬಿಟ್ಟು ಅವರ ಹಿಂದೆಯೇ ಹೋಗುತ್ತಾಳೆ. ಹಾಗೇ ಒಡವೆಗಳನ್ನು ಲಕ್ಷ್ಮೀದೇವಿಯ ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ನೀವು ಧರಿಸುವ ಒಡವೆಗಳನ್ನು ಈ ದಿನಗಳಂದು ಅಪ್ಪಿತಪ್ಪಿಯೂ ಬೇರೆಯವರಿಗೆ ಧರಿಸಲು ನೀಡಬೇಡಿ.
ಹಾಗೇ ಅಮವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಮನೆಯಲ್ಲಿರುವ ದವಸಧಾನ್ಯಗಳನ್ನು ಅದರಲ್ಲೂ ಹಾಲು ಮೊಸರು, ಅರಶಿನ ಇಂತಹ ವಸ್ತುಗಳನ್ನು ನೀಡಬಾರದು.