ಬೆಂಗಳೂರು : ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಅನೇಕರು ಹೇಳುತ್ತಾರೆ. ಆದರೆ ಈ ಬಗ್ಗೆ ಶಾಸ್ತ್ರಗಳು ಏನು ಹೇಳುತ್ತವೆ ಎನ್ನುವುದನ್ನು ತಿಳಿಯೋಣ.
ನಿಜವಾಗಿ ಶಿವಲಿಂಗವನ್ನು ಮನೆಯಲ್ಲಿ ಇಟ್ಟುಕೊಂಡರೆ ಯಾವ ದೋಷವು ಇರುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಕೇವಲ ಅಲಂಕಾರಕೋಸ್ಕರ, ಧರ್ಮ ಪ್ರಚಾರಕೋಸ್ಕರ ಇಟ್ಟುಕೊಳ್ಳಬಹುದು. ಆದರೆ ಈ ಪ್ರತಿಮೆಗಳಿಗೆ ಅಪ್ಪಿತಪ್ಪಿಯೂ ಅಭಿಷೇಕ , ಆರಾಧನೆ , ನೈವೇದ್ಯ ಮಾಡಬಾರದು.
ಯಾಕೆಂದರೆ ಒಂದು ಬಾರಿ ಪೂಜೆ ಮಾಡಿದ ವಿಗ್ರಹವನ್ನು ಯಾವುದೇ ಕಾರಣಕ್ಕೂ ಎತ್ತಿಡಬಾರದು. ಒಂದು ಸಾರಿ ದೇವರಿಗೆ ಶಕ್ತಿ ಆವಾಹನೆ ಆಗಿದ್ದಾಗ ಆ ಶಕ್ತಿ ವಿಗ್ರಹದಲ್ಲಿಯೇ ನಿಗೂಢವಾಗಿ ಇರುತ್ತದೆ. ಆದ್ದರಿಂದ ಶಿವಲಿಂಗಕ್ಕೆ ನಿತ್ಯಪೂಜೆ ಮಾಡುವವರು ಮನೆಯಲ್ಲಿ ಅದನ್ನು ಪ್ರತಿಷ್ಠಾಪಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.