Webdunia - Bharat's app for daily news and videos

Install App

ಗಣೇಶನ ಪೂಜೆಗೆ ತುಳಸಿಯನ್ನು ಬಳಸುವಂತಿಲ್ಲ. ಯಾಕೆ ಗೊತ್ತಾ?

Webdunia
ಭಾನುವಾರ, 15 ಜುಲೈ 2018 (14:51 IST)
ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ತುಂಬಾ ಮಹತ್ವವಿದೆ. ವಿಷ್ಣು ಮತ್ತು ಕೃಷ್ಣನ ಪೂಜೆಯು ತುಳಸಿ ಇಲ್ಲದೆ ಸಂಪೂರ್ಣಗೊಳ್ಳುವುದೇ ಇಲ್ಲ. ಆದರೆ ವಿಘ್ನಗಳನ್ನು ನಿವಾರಿಸುವ ಗಣೇಶನ ಪೂಜೆಗೆ ಮಾತ್ರ ತುಳಸಿಯನ್ನು  ಬಳಸುವಂತಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.


ಯಮುನಾ ದಂಡೆಯ ತೀರದಲ್ಲಿ ಒಮ್ಮೆ ಗಣಪತಿ ಧ್ಯಾನಸ್ಥನಾಗಿರುತ್ತಾನೆ. ತುಳಸಿ ಅನ್ನುವ ಹುಡುಗಿ ಅಲ್ಲಿ ಹೋಗುತ್ತಿರುತ್ತಾಳೆ. ಆಕೆ ಗಣೇಶನನ್ನು ನೋಡಿದಾಗ ಆಕರ್ಷಿತಳಾಗಿ ತನ್ನನ್ನು ಮದುವೆಯಾಗುವಂತೆ ವಿನಾಯಕನನ್ನು ಕೇಳಿಕೊಳ್ಳುತ್ತಾಳೆ. ಆದರೆ ಆಕೆಯ ಆಸೆಗೆ ತಣ್ಣೀರೆರಚುವ ಗಣೇಶ, ಸಹನೆಯಿಂದ ನಿರಾಕರಿಸುತ್ತಾನೆ. ಇದರಿಂದ ಕೋಪೋದ್ರಿಕ್ತಗೊಳ್ಳುವ ತುಳಸಿ, ಗಣೇಶನಿಗೆ ಎರಡೆರಡು ಬಾರಿ ಮದುವೆಯಾಗುವಂತೆ ಆಗಲಿ ಎಂದು ಶಪಿಸುತ್ತಾಳೆ. ಇದಕ್ಕೆ ಪ್ರತಿಯಾಗಿ ಗಣಪತಿಯೂ ಕೂಡ ಶಾಪ ನೀಡುತ್ತಾನೆ. ನೀನು ರಾಕ್ಷಸನನ್ನು ಮದುವೆಯಾಗುವಂತೆ ಆಗಲಿ ಎಂದು ಹೇಳಿಬಿಡುತ್ತಾನೆ ಮತ್ತು ಆತನ ಪೂಜೆಯಲ್ಲಿ ಯಾವುದೇ ಕಾರಣಕ್ಕೂ ತುಳಸಿಗೆ ಅವಕಾಶವಿಲ್ಲ ಎಂದು ಹೇಳುತ್ತಾನೆ. ಆದ್ದರಿಂದ ತುಳಸಿಯನ್ನು ಗಣೇಶನ ಪೂಜೆಗೆ ಬಳಸುವಂತಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments