Select Your Language

Notifications

webdunia
webdunia
webdunia
webdunia

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

Anjaneya swamy

Krishnaveni K

ಬೆಂಗಳೂರು , ಮಂಗಳವಾರ, 25 ಮಾರ್ಚ್ 2025 (08:40 IST)
ಬೆಂಗಳೂರು: ಮಂಗಳವಾರ ಆಂಜನೇಯನಿಗೆ ವಿಶೇಷವಾದ ದಿನವಾಗಿದೆ. ಇಂದು ನೀವು ಅಂದುಕೊಂಡ ಕೆಲಸವಾಗಬೇಕಾದರೆ ಈ ಸ್ತೋತ್ರವನ್ನು ಹೇಳಿ ಮುಂದುವರಿಯಿರಿ.

ಆಂಜನೇಯನು ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂಕಟಗಳನ್ನು ಪರಿಹರಿಸಿ ಅನುಗ್ರಹಿಸುತ್ತಾನೆ. ಸ್ವತಃ ಪ್ರಭು ಶ್ರೀರಾಮಚಂದ್ರನ ಕಷ್ಟವನ್ನೇ ಪರಿಹರಿಸಿದ ಆಂಜನೇಯ. ನಮ್ಮಂತಹ ಮಾನವರು ಭಕ್ತಿಯಿಂದ ಬೇಡಿಕೊಂಡರೆ ಅನುಗ್ರಹಿಸುತ್ತಾನೆ.

ಆಂಜನೇಯ ಸ್ವಾಮಿಯನ್ನು ವಿದ್ಯೆ, ಬುದ್ಧಿ, ಉದ್ಯೋಗ, ವಿವಾಹ, ಸಂತಾನ ಇತ್ಯಾದಿ ಹಲವು ಸಮಸ್ಯೆಗಳ ಪರಿಹಾರಕ್ಕೆ ಪೂಜೆ ಮಾಡುತ್ತೇವೆ. ಅದರಲ್ಲೂ ನಾವು ಅಂದುಕೊಂಡ ಕೆಲಸವಾಗಬೇಕಾದರೆ ಗಣಪತಿ ದೇವರ ಬಳಿಕ ಆಂಜನೇಯನ ಮೊರೆ ಹೋಗುತ್ತೇವೆ.

ತ್ವಮಸ್ಮಿನ್ ಕಾರ್ಯನಿರ್ಯೋಗೇ ಪ್ರಮಾಣಂ ಹರಿಸತ್ತಮ |
ಹನುಮಾನ್ ಯತ್ನಮಾಸ್ಥಾಯ ದುಃಖ ಕ್ಷಯಕರೋ ಭವ 


ಇದು ಆಂಜನೇಯ ಕಾರ್ಯಸಿದ್ಧಿ ಮಂತ್ರವಾಗಿದ್ದು, ಜೀವನದಲ್ಲಿ ನಾವು ಅಂದುಕೊಂಡ ಕೆಲಸಗಳಾಗಬೇಕಾದರೆ ಕಾರ್ಯಸಿದ್ಧಿ ಆಂಜನೇಯ ಮಂತ್ರವನ್ನು ಪಠಿಸಬೇಕು. ಇದನ್ನು ತಪ್ಪದೇ ಪ್ರತಿನಿತ್ಯ ಪಠಿಸುವುದರಿಂದ ಉದ್ಯೋಗ, ವಿದ್ಯಾಭ್ಯಾಸದಲ್ಲಿ ಯಶಸ್ಸು ಸಾಧಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ