Select Your Language

Notifications

webdunia
webdunia
webdunia
webdunia

ಭಾರತಕ್ಕೆ 41 ಮಿಲಿಯನ್ ಡಾಲರ್ ಹೆಚ್ಚುವರಿ ಹಣಕಾಸು ನೆರವು ನೀಡಿದ ಅಮೆರಿಕ

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸ್ಪಂದಿಸಲು ಮತ್ತು ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ದೇಶದ ಸನ್ನದ್ಧತೆಯನ್ನು ಬಲಪಡಿಸಲು ಭಾರತಕ್ಕೆ ಸಹಾಯ ಮಾಡಲು ಯುಎಸ್ಐಐಡಿ ಹೆಚ್ಚುವರಿ 41 ಮಿಲಿಯನ್ ಡಾಲರ್ ಬೆಂಬಲ ಘೋಷಿಸಿದೆ.

ಭಾರತಕ್ಕೆ 41 ಮಿಲಿಯನ್ ಡಾಲರ್ ಹೆಚ್ಚುವರಿ ಹಣಕಾಸು ನೆರವು ನೀಡಿದ ಅಮೆರಿಕ
ವಾಷಿಂಗ್ಟನ್ , ಮಂಗಳವಾರ, 29 ಜೂನ್ 2021 (13:41 IST)
ವಾಷಿಂಗ್ಟನ್ (ಯುಎಸ್): ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ಭವಿಷ್ಯದ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ದೇಶದ ಸನ್ನದ್ಧತೆಯನ್ನು ಬಲಪಡಿಸಲು ಭಾರತಕ್ಕೆ ಹೆಚ್ಚುವರಿ 41 ಮಿಲಿಯನ್ ಡಾಲರ್ ಧನಸಹಾಯವನ್ನು ಅಮೆರಿಕ ಘೋಷಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ, ಭಾರತವು ಕೊರೊನಾ ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ 3,00,000ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಹೋರಾಡಿತು. ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯಿಂದ ರೋಗಿಗಳು ತತ್ತರಿಸಿದ್ದರು.
ಅಮೆರಿಕದ ಆರೋಗ್ಯ ತುರ್ತು ಸಮಯದಲ್ಲಿ ಭಾರತ ಉದಾರವಾಗಿ ಸಹಾಯಹಸ್ತ ಚಾಚಿತ್ತು. ಈಗ ಆ ದೇಶ ಭಾರತದ ಜನರೊಂದಿಗೆ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದೆ ಎಂದು ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಏಜೆನ್ಸಿ ಸೋಮವಾರ ಹೇಳಿದೆ.
ಯುಎಸ್ಐಐಡಿಯ ನೆರವು ಕೊರೊನಾ ಪರೀಕ್ಷೆ, ಸಾಂಕ್ರಾಮಿಕ-ಸಂಬಂಧಿತ ಮಾನಸಿಕ ಆರೋಗ್ಯ ಸೇವೆಗಳು, ವೈದ್ಯಕೀಯ ಸೇವೆಗಳಿಗೆ ಸಮಯೋಚಿತ ಉಲ್ಲೇಖಗಳು ಮತ್ತು ದೂರದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಬೆಂಬಲಿಸುತ್ತದೆ.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಭಾರತದ ಕೊರೊನಾ ಪರಿಹಾರ ಮತ್ತು ಪ್ರತಿಕ್ರಿಯಾತ್ಮಕ ಪ್ರಯತ್ನಗಳಿಗಾಗಿ ಯುಎಸ್ಐಐಡಿ 200 ಮಿಲಿಯನ್ ಡಾಲರ್ಗಿಂತ ಹೆಚ್ಚಿನ ಕೊಡುಗೆ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ 5 ರೊಳಗೆ ಭಾರೀ ದಾಳಿಗೆ ಉಗ್ರರ ಸಂಚು