Publish Date: Mon, 28 Sep 2015 (18:34 IST)
Updated Date: Mon, 28 Sep 2015 (18:35 IST)
ಸಿಖ್ ಎನ್ನುವ ಪದ ಸಂಸ್ಕ್ರತ ಶಬ್ದವಾದ ಶಿಷ್ಯ ಎನ್ನುವುದರಿಂದ ಉದ್ಬವವಾಗಿದೆ. ಪಂಜಾಬಿ ಭಾಷೆಯಲ್ಲಿ ಸಿಖ್ ಎಂದರೆ ಕಲಿಯುವವ ಎಂದರ್ಥ. ಸಿಖ್ ಧರ್ಮವನ್ನು ಪಾಲಿಸುವವರು ಸಿಖ್ಖರು ಎಂದು ಕರೆಯಲಾಗುತ್ತದೆ.
ಸಿಖ್ ಧರ್ಮವು ಜಗತ್ತಿನಲ್ಲಿ ಐದನೇ ಅತಿದೊಡ್ಡ ಧರ್ಮವಾಗಿದೆ. ಸಿಖ್ ಧರ್ಮದವರಿಗೆ "ಗುರು ಗ್ರಂಥ ಸಾಹಿಬ್" ಧರ್ಮ ಗ್ರಂಥವಾಗಿದೆ.ಈ ಧರ್ಮ ಗ್ರಂಥ ಸಿಖ್ ಧರ್ಮದವರಿಗೆ ಗುರುವಾಗಿ ಮಾರ್ಗದರ್ಶನ ನೀಡುತ್ತದೆ. ಸಿಖ್ ಧರ್ಮವನ್ನು ಗುರುನಾನಕ್‌ರು ಸ್ಥಾಪಿಸಿದ್ದು, ಈ ಧರ್ಮದಲ್ಲಿ ಹತ್ತು ಗುರುಗಳು ದಶಗುರುಗಳು ಎಂದು ಖ್ಯಾತಿ ಪಡೆದಿದ್ದಾರೆ.
ಸಿಖ್ ಧರ್ಮದವರು ತಮ್ಮ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೀಬ್‌ದಲ್ಲಿ ದಶ ಗುರುಗಳು ನೀಡಿದ ಸಂದೇಶವನ್ನು ಪಾಲಿಸುತ್ತಾರೆ.
ಅವುಗಳಲ್ಲಿ ಪ್ರಮುಖ ಎಂದರೆ:
- ಜಗತ್ತಿನ ಎಲ್ಲ ಮಾನವರಿಗೆ ಒಂದೇ ದೇವರು.
- ದೇವರ ಸಮ್ಮುಖದಲ್ಲಿ ಎಲ್ಲರು ಸರಿಸಮಾನರು.
- ಕಠಿಣ ಪರಿಶ್ರಮ ಮತ್ತು ಸಾಹಸದಿಂದ ಜೀವನ ನಡೆಸು.
- ನಿಮಗೆ ಜೀವನವನ್ನು ಉಡುಗೊರೆಯಾಗಿ ನೀಡಿದ ಭಗವಂತನ ಮೇಲೆ ನಂಬಿಕೆಯಿಡುವುದು ಮತ್ತು ಎಲ್ಲದಕ್ಕೂ ಅವನನ್ನೇ ಅವಲಂಬಿಸುವುದು.
- ನಿರಂತರವಾಗಿ ದೇವರ ನಾಮಸ್ಮರಣೆ, ಧ್ಯಾನ ಮಾಡುವುದು.
- ಜೀವಿತಾವಧಿಯಲ್ಲಿ ಜನಸಮುದಾಯಕ್ಕೆ ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಮಾಡುವುದು.
- ಕಷ್ಟದಲ್ಲಿದ್ದವರಿಗೆ ನಿಮ್ಮ ಸಂಪತ್ತಿನಲ್ಲಿ ಸಹಾಯ ಕೊಡುವುದು
- ಆಂತರಿಕ ಕ್ಷೋಭೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳಿಂದ ದೂರವಿರುವುದು.