ಇದು ಕೇವಲ ಈ ವಿಶೇಷ ದಿನದ ಬಗ್ಗೆ ಅಲ್ಲ, ಇದು ನಿಮ್ಮ ಸಂಪೂರ್ಣ ಜೀವನಕ್ಕೆ ಸಂಬಂಧಿಸಿದ್ದು. ನಿಮ್ಮಲ್ಲಿ ಕೆಲವರು ಅವಿವಾಹಿತರು ನಮ್ಮ ಪ್ರೇಮ ಜೀವನವೇ ಸರಿಯಾಗಿಲ್ಲ ಎಂದುಕೊಳ್ಳುವವರು ಈ ವ್ಯಾಲೆಂಟೈನ್ ದಿನದ ಬಗ್ಗೆ ಹೆಚ್ಚು ಗಮನ ಹರಿಸಬಹುದು. ಯಾಕೆಂದರೆ ಕೆಲವರ ಪ್ರೇಮ ಜೀವನ ಆರಂಭವಾಗುವುದೇ ಈ ದಿನದಂದು. ಇದಕ್ಕೂ ಹೆಚ್ಚಿನದಾಗಿ, ವ್ಯಾಲೆಂಟೈನ್ ದಿನ ಕಳೆದ ಬಳಿಕವೂ ನಿಮ್ಮ ಪ್ರೇಮ ಸಂಬಂಧವನ್ನು ಕಾಯ್ದುಕೊಳ್ಳುವುದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ನಿಮ್ಮ ಪ್ರೇಮಿಗೆ ಯಾವ ಉಡುಗೊರೆ ಕೊಡುವುದು ಎಂಬುದರ ಬಗ್ಗೆ ನೀವು ಯೋಚಿಸಬೇಕಾಗುತ್ತದೆ ಮತ್ತು ನೀವು ಕೂಡ ನಿರೀಕ್ಷಿತ ಅಥವಾ ಅನಿರೀಕ್ಷಿತ ಗಿಫ್ಟ್‌ಗಳನ್ನು ನಿಮ್ಮ ಪ್ರೇಮಿಯಿಂದ ಪಡೆಯಬಹುದಾಗಿದೆ. ಇಂಥಾ ಸಣ್ಣ ಪುಟ್ಟ ಸಂಗತಿಗಳೇ ನಿಮ್ಮ ಸಂಬಂಧವನ್ನು ಗಟ್ಟಿಯಾಗಿಸುವುದು.
ನಿಮ್ಮ ಜತೆಗಾರ ಅಥವಾ ಜತೆಗಾರ್ತಿಯ ಮೇಲೆ ಪ್ರೀತಿ ಸ್ಫುರಿಸುವ ದಿನ ವ್ಯಾಲೆಂಟೈನ್ ಡೇ. ಅದಕ್ಕೂ ಹೆಚ್ಚಿನದಾಗಿ, ತಾವು ಜೀವನ ಪೂರ್ತಿಯಾಗಿ ನೆನಪಿಡುವಂತೆ ಒಟ್ಟಾಗಿಯೇ ಇರುವ ಮತ್ತು ಈ ದಿನದ ಹೊರತಾಗಿಯೂ ನೀವು ಜೀವನವನ್ನು ಉತ್ಸಾಹದಿಂದ ಆನಂದಿಸುವಂತಹಾ ಅನುಭವಗಳನ್ನು, ನೆನಪುಗಳನ್ನು ಹಂಚಿಕೊಳ್ಳುವ ದಿನವೂ ಇದಾಗಿದೆ. ಯಾವತ್ತೂ ಬ್ಯುಸಿಯಾಗಿರುವ ದಿನಗಳಿಂದ ದೂರವಾಗಿ, ನಿಮಗೆ ವ್ಯಾಲೆಂಟೈನ್ ನೆನಪುಗಳು ಸದಾ ಉಳಿಯುವಂತಾಗಲು ಇಲ್ಲಿವೆ ಕೆಲವು ಫೆಂಗ್ ಶುಯಿಯ ಧನಾತ್ಮಕ ಶಕ್ತಿಯ ಕೆಲವೊಂದು ಉಡುಗೊರೆಗಳ ಬಗ್ಗೆ ಸಲಹೆಗಳು.
ಫೆಂಗ್ ಶುಯಿ ವಿಧಾನ
ನೀವು ಉಡುಗೊರೆಯನ್ನು ಕೊಡುವಾಗ ಅದು ನಿಮ್ಮ ಪ್ರೇಮಿಯ ಜೀವನದಲ್ಲಿ ಸಂತೋಷ ತರಬಲ್ಲಂತಹಾ, ಸಮೃದ್ಧ ಶಕ್ತಿಯುಳ್ಳದ್ದಾಗಿರಬೇಕು. ಹೀಗಾಗಿ ಅದರ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಯೋಚಿಸಬೇಕು. ಅವುಗಳಲ್ಲಿ ಪ್ರಮುಖವಾದವು:
ಎ) ಪುಟ್ಟ ಮತ್ತು ಆಕರ್ಷಕವಾದ ನೀರಿನ ಕಾರಂಜಿ (ಸರಿಯಾಗಿರುವ ಡೆಕೊರೇಶನ್ ಐಟಂ ಕೂಡ ಆಗಬಹುದು). ಇದು ನಿಮಗೆ ಅಲ್ಲಿಲ್ಲಿಂದ ನೀರು ತೊಟ್ಟಿಕ್ಕುವಂತಹಾ ಶಾಂತ ಸ್ವರವನ್ನು ಒದಗಿಸುತ್ತದೆ. ಅದು ನಿಮ್ಮ ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ ಮತ್ತು ನಿಮ್ಮ ವ್ಯಾಲೆಂಟೈನ್‌ನ ವೃತ್ತಿ ಹಾಗೂ ಆಧ್ಯಾತ್ಮಿಕ ಜೀವನದ ಮೇಲೆ ಶಕ್ತಿಯನ್ನು ಉತ್ತೇಜಿಸುತ್ತದೆ.
ಬಿ) ರೋಮ್ಯಾಂಟಿಕ್ ಆದ, ಇಂಪಾದ ಧ್ವನಿ ಹೊರಡಿಸುವ ಒಳಾಂಗಣದ ವಿಂಡ್ ಚೈಮ್ ನಿಮ್ಮ ಮನೆಯಲ್ಲಿಡೀ ಧನಾತ್ಮಕ ಶಕ್ತಿಯ ಪ್ರವಹಿಸುವಿಕೆಗೆ ನೆರವಾಗುತ್ತದೆ. ಕೆಲವು ಸಂಗೀತ ಸಿ.ಡಿ.ಗಳು ಕೂಡ ಧನಾತ್ಮಕ ಎನರ್ಜಿ ನೀಡುತ್ತವೆ. ಸಂಗೀತವು ನಿಮಗೂ ಪ್ರೇರಣೆಯಾಗಬಹುದು ಮತ್ತು ನಿಮಗೆ ಯಶಸ್ವೀ ಸಂದೇಶಗಳನ್ನೂ ದೊರೆಯುವಂತೆ ಮಾಡಬಹುದು.
ನಿಮ್ಮ ಪ್ರೇಮಿಗೆ ನೀವು ಸಾಂಪ್ರದಾಯಿಕ ವ್ಯಾಲೆಂಟೈನ್ ಉಡುಗೊರೆ ನೀಡಬೇಕೆಂಬ ಆಸೆಯಲ್ಲಿದ್ದರೆ, ಅವರು ತುಂಬಾ ಖುಷಿಯಿಂದ ತೆಗೆದುಕೊಳ್ಳಬಹುದಾದಂಥವುಗಳನ್ನೇ ನೀಡಿ. ಸಾಂಪ್ರದಾಯಿಕ ಉಡುಗೊರೆಗಳಲ್ಲಿ, ಜೀವಮಾನವಿಡೀ ಉಳಿಯುವಂಥವುಗಳಿಗೆ ಆದ್ಯತೆ ನೀಡಿ. ಅವುಗಳಲ್ಲಿ ಪ್ರಮುಖವಾದವುಗಳು:
ಎ) ಪ್ರೀತಿಯ ಸಂಬಂಧವನ್ನು ಸಂಕೇತೀಕರಿಸುವ ಒಂದು ಜೊತೆ ಒಳಾಂಗಣ ಗಿಡಗಳು ಅಥವಾ ಗುಲಾಬಿ ಹೂವುಗಳನ್ನು ನೀವು ನೀಡಬಹುದು. ಅದೇ ರೀತಿ, ನಿಮ್ಮ ವ್ಯಾಲೆಂಟೈನ್ ಆ ಗಿಡಗಳನ್ನು ಅಥವಾ ಗುಲಾಬಿಯನ್ನು ಮೆಚ್ಚಿಕೊಳ್ಳುತ್ತಾಳೆಯೇ ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಇಲ್ಲವಾದಲ್ಲಿ, ಮುಂದೆ ಪರಿಸ್ಥಿತಿ ಕಷ್ಟವಾದೀತು.
ಬಿ) ಇಬ್ಬರಿಗೂ ಮೆಚ್ಚುಗೆಯಿರುವ ಕ್ರೀಡಾ ಕೂಟವೋ, ನಾಟಕವೋ, ಸಂಗೀತ ಕಾರ್ಯಕ್ರಮವೋ ಮುಂತಾದವುಗಳಿಗಾಗಿ ನಿಮಗಿಬ್ಬರಿಗೂ ಸೀಸನ್ ಟಿಕೆಟುಗಳನ್ನು ಖರೀದಿಸಿರಿ, ಅಥವಾ ಚಲನಚಿತ್ರ ನೋಡಲೆಂದು ಟಿಕೆಟುಗಳನ್ನು ಗಿಫ್ಟ್ ಪ್ಯಾಕ್ ಆಗಿ ಕೊಟ್ಟುಬಿಡಿ.
ಸಿ) ನಿಮ್ಮ ವ್ಯಾಲೆಂಟೈನ್‌ಗೆ ಚಾಕೊಲೇಟ್ ಎಂದರೆ ಬಲು ಅಚ್ಚುಮೆಚ್ಚು ಎಂದಾಗಿದ್ದರೆ, ಅವರ ಮೆಚ್ಚಿನ ಡಜನ್ ಚಾಕೊಲೇಟ್‌ಗಳನ್ನು ನೀಡಿ. ನಿಮಗೆ ಸಾಧ್ಯವಾದರೆ, ಒಳಗೆ ಕ್ರೀಮ್ ತುಂಬಿರುವ ಚಾಕೊಲೇಟ್‌ಗಳು ಉತ್ತಮ ಆಯ್ಕೆ.
ಡಿ) ಯಾರೂ ಕೊಡಬಹುದಾದ ಅತ್ಯುತ್ತಮ ಗಿಫ್ಟ್ ಎಂದರೆ, ನಿಮ್ಮ ವ್ಯಾಲೆಂಟೈನ್ ಜೊತೆಗಿನ ಸಂಬಂಧದಲ್ಲಿ ವರ್ಷಪೂರ್ತಿ ಪಾಸಿಟಿವ್ ಎನರ್ಜಿ ತುಂಬಿರುವುದರ ಬಗ್ಗೆ ಗಮನ ಹರಿಸುವುದು.
ಇನ್ನು ನೀವು, ನಿಮ್ಮ ಬೆಡ್ ರೂಮ್‌ನಲ್ಲಿಯೂ ಆಗ್ನೇಯ ದಿಕ್ಕಿನಲ್ಲಿರುವ ಸಂಬಂಧಗಳ ಜಾಗದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ಅಲ್ಲಿ
ಈ ಕೆಳಗಿನ ಕೆಲವು ವಸ್ತುಗಳನ್ನು ಇರಿಸಬಹುದು:
ಎ) ಒಂದೇ ಗಾತ್ರದ ಹೂವುಗಳು
ಬಿ) ಒಂದು ಜೊತೆ, ಅಕ್ಕಪಕ್ಕದಲ್ಲಿ ಬಾಗಿಕೊಂಡಿರುವ ಅಥವಾ ಪರಸ್ಪರ ನೋಡುತ್ತಿರುವ ಟರ್ಟಲ್ ಡೋವ್‌ಗಳು ಅಥವಾ ಮ್ಯಾಂಡರಿನ್‌ಗಳು.
ಸಿ) ಕುತ್ತಿಗೆ ಪರಸ್ಪರ ಬೆಸೆದುಕೊಂಡಿರುವ ಎರಡು ಜಿರಾಫೆಗಳು.
ಡಿ) ಒಟ್ಟಿಗಿರುವ ಎರಡು ಹೃದಯಗಳು ಅಥವಾ 2 ಸಂಖ್ಯೆ ಇರುವ ಯಾವುದೇ ಚಿತ್ರ.
ಇನ್ನೂ ವ್ಯಾಲೆಂಟೈನ್‌ಗಾಗಿ ಹುಡುಕಾಟದಲ್ಲಿದ್ದೀರಾ?
ನೀವಿನ್ನೂ ನಿಮ್ಮ ಪ್ರೇಮಿಯ ಹುಡುಕಾಟದಲ್ಲಿದ್ದರೆ, ನೀವು ನಿಮ್ಮ ಬೆಡ್ ರೂಮಿನ ಪೂರ್ವ ಪ್ರದೇಶವನ್ನು ಸುಂದರವಾದ ಹಸಿರು ಗಿಡದಿಂದ ಶಕ್ತಿಯುತವಾಗಿಸಬೇಕಾಗುತ್ತದೆ. ಸಿಲ್ಕ್ ಗಿಡವು ಕೂಡ ಒಳ್ಳೆಯ ಆಯ್ಕೆ. ಗಿಡದ ಶಕ್ತಿಯು ಹೊಸ ಸಂಬಂಧದ ಹುಟ್ಟಿನ ಅಥವಾ ಈಗಿರುವ ಸಂಬಂಧದ ವೃದ್ಧಿಯ ಸಂಕೇತವಾಗುತ್ತದೆ.
ಬೇರೆ ಯಾರಿಗೇ ಆದರೂ ಗಿಫ್ಟ್ ಕೊಡುವುದು ನಿಮಗಿಷ್ಟವಿಲ್ಲ ಎಂದಾದರೆ, ನಿಮ್ಮನ್ನು ನೀವು ಬಹುವಾಗಿ ಪ್ರೀತಿಸುತ್ತೀರಿ ಎಂದು ಭಾವಿಸಿ ನಿಮಗೆ ನೀವೇ ಉಡುಗೊರೆ ಕೊಟ್ಟುಕೊಳ್ಳಿ. ವ್ಯಾಲೆಂಟೈನ್ ಡೇ ಎಂಬುದು ಗೌರವ, ಪ್ರೀತಿ ಮತ್ತು ಇನ್ನೊಬ್ಬರ ಬಗೆಗಿನ ಬದ್ಧತೆಯನ್ನು ಗುರುತಿಸುವ ದಿನ.
ಇಬ್ಬರಿಗೆ ಎಲ್ಲಾದರೂ ಒಳ್ಳೆಯ ಜಾಗದಲ್ಲಿ ಅತ್ಯುತ್ತಮ ಡಿನ್ನರ್, ಪಿಕ್ನಿಕ್ ಅಥವಾ ಪಾರ್ಟಿಯಲ್ಲಿ ಭಾಗವಹಿಸುವುದು ಮುಂತಾದವುಗಳನ್ನು ನೀವು ಯೋಚಿಸಬಹುದು. ಆದರೆ, ನಿಮ್ಮ ಸಂಬಂಧವು ನಿಮ್ಮಿಂದ ಬೇಡುವ ಗೌರವ ಕೊಡುವ ಮತ್ತು ಅದಕ್ಕೆ ಬದ್ಧವಾಗುವ ಮೂಲಕ ನೀವು ನಿಮ್ಮ ಪ್ರೀತಿಯನ್ನು ಆಚರಿಸಿಕೊಳ್ಳುವುದೇ ಅತ್ಯಂತ ಪ್ರಮುಖವಾದದ್ದು ಎಂಬುದು ನೆನಪಿರಲಿ.