Select Your Language

Notifications

webdunia
webdunia
webdunia
webdunia

ಶ್ವೇತಾಂಬರರು

ಶ್ವೇತಾಂಬರರು

ಇಳಯರಾಜ

WD
ಎಲ್ಲಾ ಧರ್ಮಗಳಲ್ಲೂ ಪಂಥಗಳಿವೆ. ಇದಕ್ಕೆ ಜೈನ ಧರ್ಮ ಹೊರತಲ್ಲ. ಈ ಧರ್ಮದಲ್ಲಿ ಶ್ವೇತಾಂಬರ ಮತ್ತು ದಿಗಂಬರ ಎಂಬ ಎರಡು ಪಂಥಗಳಿದ್ದು, ಶ್ವೇತ ವರ್ಣದ ಉಡುಗೆ ತೊಡುವವರನ್ನು ಶ್ವೇತಾಂಬರರು ಎಂದು ಕರೆಯುತ್ತಾರೆ.

ಶ್ವೇತಾಂಬರರು ಪ್ರಮುಖವಾಗಿ ಜೈನ ಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥನ ಅನುಯಾಯಿಗಳು. ವಸ್ತ್ತ್ರ ಧರಿಸಲು ಪಾರ್ಶ್ವನಾಥನ ವಿರೋಧ ವಿರಲಿಲ್ಲ. ಸ್ವಚ್ಛ ಹಾಗೂ ಶಾಂತಿಯ ಸಂಕೇತವಾದ ಬಳಿ ಉಡುಪು ಧರಿಸಲು ಇವನು ಪ್ರೌತ್ಸಾಹಿಸಿದ. ಯಜ್ಞ ಯಾಗಾದಿಗಳನ್ನು ಹಾಗೂ ಪ್ರಾಣಿ ಬಲಿಯನ್ನು ವಿರೋಧಿಸಿದ. ಜಾತಿ ಪದ್ಧತಿ ಹಾಗೂ ದೇವದೇವಿಯರ ಪೂಜೆಗೂ ಪಾರ್ಶ್ವನಾಥನ ವಿರೋಧವಿತ್ತು.

ಇವನ ಪ್ರಕಾರ ಸ್ತ್ತ್ರೀಯರೂ ಮೋಕ್ಷ ಸಾಧಿಸಬಹುದು. ಸ್ತ್ತ್ರೀಯರಿಗೆ ಧಾರ್ಮಿಕ ಕ್ಷೇತ್ರದಲ್ಲಿ ಸಮಾನ ಸ್ಥಾನ ನೀಡಬೇಕೆಂದು ಪಾರ್ಶ್ವನಾಥ ಹೇಳಿದ. ಬಹುತೇಕ ಜೈನು ಅನುಯಾಯಿಗಳು ಪಾರ್ಶ್ವನಾಥನ ಮಾರ್ಗ ಅನುಸರಿಸಿ, ಬಿಳಿ ಉಡುಪು ಧರಿಸಲು ಆರಂಭಿಸಿದರು. ಇವರನ್ನು ಶ್ವೇತಾಂಬರ ಜೈನರು ಎಂದು ಕರೆಯಲಾಗುತ್ತದೆ. ಶ್ವೇತಾಂಬರರು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ.

Share this Story:

Follow Webdunia kannada