Select Your Language

Notifications

webdunia
webdunia
webdunia
webdunia

ಶುಭಫಲ ನೀಡುವ ಗುರು ಪುಷ್ಕರಯೋಗ

ಶುಭಫಲ ನೀಡುವ ಗುರು ಪುಷ್ಕರಯೋಗ
PTI
ನವಗ್ರಹಗಳಲ್ಲಿ ಹೆಚ್ಚು ಶುಭಫಲ ನೀಡುವ ಗ್ರಹ ಗುರು. ಗುರುವಿಗೆ ಅರ್ಥವತ್ತಾದ ಶಬ್ದವೆಂದರೆ ವಿಕಾಸ ಅಥವಾ ವಿಸ್ತರಣೆ.

ಗುರು ಗ್ರಹವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷ ಸಂಚರಿಸುತ್ತಾನೆ. ರಾಶಿ ಚಕ್ರವನ್ನು ಒಂದು ಸುತ್ತು ಸುತ್ತಿ ಬರಲು 12 ವರ್ಷಗಳಾಗುತ್ತದೆ.

ಗುರು ಇದೇ ಮೇ 8 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ 14 ನಿಮಿಷಕ್ಕೆ ಮೇಷ ರಾಶಿಗೆ ಪ್ರವೇಶಿಸುತ್ತಾನೆ. 2012 ರ ಮೇ 17 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆ 34 ನಿಮಿಷಕ್ಕೆ ವೃಷಭರಾಶಿಗೆ ಪ್ರವೇಶಿಸುತ್ತಾನೆ. ಮೇಷರಾಶಿಯಲ್ಲಿ ಒಟ್ಟು 374 ದಿವಸಗಳವರೆಗೆ ಇರುತ್ತಾನೆ. ಈ ಅವಧಿಯಲ್ಲಿ ಆಗಸ್ಟ್ 31 ರಂದು ವಕ್ರೀಯಾಗಿ ಡಿಸೆಂಬರ್ 26 ರಂದು ಋಜುಮಾರ್ಗ ಪಡೆಯುತ್ತಾನೆ. ಒಟ್ಟು 117 ದಿವಸಗಳವರೆಗೆ ವಕ್ರಿಯಾಗಿರುತ್ತಾನೆ. ನಂತರ 2012 ರ ಏಪ್ರಿಲ್ 29 ರಂದು ಗುರು ಅಸ್ತವಾಗಿ ಮೇ 28 ರಂದು ಉದಯವಾಗುತ್ತಾನೆ. ಒಟ್ಟು 30 ದಿವಸಗಳವರೆಗೆ ಅಸ್ತವಾಗುತ್ತಾನೆ.

ಗುರುವಿನ ಸಂಖ್ಯೆ 3 ಗುರುವಿನ ವರ್ಷಗಳ ಅತೀ ದೊಡ್ಡ ಸಂಖ್ಯೆ 428 ಕಡಿಮೆ ಸಂಖ್ಯೆ 79, ಮದ್ಯಮ ವರ್ಷ 45 ಅತೀ ಕಡಿಮೆ ವರ್ಷ 12. ಸಾಮಾನ್ಯವಾಗಿ ವ್ಯಕ್ತಿಗಳ ಜೀವನದಲ್ಲಿ 33ನೇ ವಯಸ್ಸಿನಿಂದ 45ನೇ ವಯಸ್ಸಿನವರೆಗೆ ಗುರುವಿನ ಪ್ರಭಾವ ಹೆಚ್ಚಾಗಿರುತ್ತದೆ.

ಜಗತ್ತನ್ನು ಸೃಷ್ಠಿಸುವಾಗ, ಬ್ರಹ್ಮನು ಪುಷ್ಕರವೆಂಬ ಜಲದೇವತೆ ಮತ್ತು ಗುರುವಿನ ಸಹಾಯ ಪಡೆದುಕೊಂಡರು. ನಂತರ ಬ್ರಹ್ಮ, ಪುಷ್ಕರ ಮತ್ತು ಗುರು, ಈ ಮೂವರಲ್ಲಿ ಆದ ಒಪ್ಪಂದದಂತೆ, ಗುರು ವರ್ಷಕ್ಕೊಮ್ಮೆ ರಾಶಿಯನ್ನು ಪ್ರವೇಶಿಸಿದಾಗ, ಪವಿತ್ರವಾದ ಹನ್ನೆರಡು ನದಿಗಳಲ್ಲಿ ಒಂದೊಂದು ನದಿ ಪುಷ್ಕರವಾಗುತ್ತದೆ. ಗುರು ಒಂದು ರಾಶಿಯಿಂದ, ಇನ್ನೊಂದು ರಾಶಿಗೆ ಪ್ರವೇಶಿಸಿದಾಗ, ನಿರ್ದಿಷ್ಟಪಡಿಸಿದ ನದಿ, ಸಕಲ ದೇವತೆಗಳ ಶಕ್ತಿಯನ್ನು ಪಡೆದುಕೊಂಡು ಪುಷ್ಕರವಾಗುತ್ತದೆ. ಪುಷ್ಕರವಾದ ನದಿಗೆ ದೈವೀ ಶಕ್ತಿಯ ಅವಧಿ ಹನ್ನೆರಡು ದಿವಸಗಳವರೆಗೆ ಇರುತ್ತದೆ. ಪುಷ್ಕರವಾದ ನದಿಯಲ್ಲಿ ಹನ್ನೆರಡು ದಿವಸಗಳೊಳಗೆ ಪುಣ್ಯ ಸ್ನಾನಮಾಡಿದವರಿಗೆ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುತ್ತದೆ.

ಗುರು ಮೇಷರಾಶಿಗೆ ಪ್ರವೇಶಿಸಿದಾಗ ಗಂಗಾನದಿ, ಪುಷ್ಕರವಾಗುತ್ತದೆ. ವೃಷಭರಾಶಿಗೆ ಪ್ರವೇಶಿಸಿದಾಗ ನರ್ಮದಾ ನದಿ, ಮಿಥುನರಾಶಿಗೆ ಪ್ರವೇಶಿಸಿದಾಗ ಸರಸ್ವತಿ ನದಿ, ಕಟಕರಾಶಿಗೆ ಪ್ರವೇಶಿಸಿದಾಗ ಯಮುನಾ ನದಿ, ಸಿಂಹರಾಶಿಗೆ ಪ್ರವೇಶಿಸಿದಾಗ ಗೋದಾವರಿ ನದಿ, ಕನ್ಯಾರಾಶಿಗೆ ಪ್ರವೇಶಿಸಿದಾಗ ಕೃಷ್ಣನದಿ, ತುಲಾರಾಶಿಗೆ ಪ್ರವೇಶಿಸಿದಾಗ ಕಾವೇರಿನದಿ, ವೃಶ್ಚಿಕರಾಶಿಗೆ ಪ್ರವೇಶಿಸಿದಾಗ ತಾಮ್ರಪಣಿ ನದಿ, ಧನಸ್ಸು ರಾಶಿಗೆ ಪ್ರವೇಶಿಸಿದಾಗ ಸಿಂಧುನದಿ, ಮಕರಾಶಿಗೆ ಪ್ರವೇಶಿಸಿದಾಗ ತುಂಗಭದ್ರಾನದಿ, ಕುಂಭರಾಶಿಗೆ ಪ್ರವೇಶಿಸಿದಾಗ ಭೀಮನದಿ, ಮೀನರಾಶಿಗೆ ಪ್ರವೇಶಿಸಿದಾಗ ತಪತೀ ನದಿ ಪುಷ್ಕರವಾಗುತ್ತದೆ. ಗುರು, ಮೇ 8 ರಂದು ಮೇಷರಾಶಿಗೆ ಕುಂಭರಾಶಿಗೆ ಪ್ರವೇಶಿಸುತ್ತಾನೆ. ಆಗ ಗಂಗಾನದಿ ಪುಷ್ಕರವಾಗುತ್ತದೆ. ಈ ಸಂದರ್ಭದಲ್ಲಿ ಗಂಗಾನದಿ ಎಲ್ಲಾ ದೇವತೆಗಳ ಶಕ್ತಿ ಪಡೆದು ಪುಷ್ಕರಹೊಂದುವುದರಿಂದ, ಅಂದಿನಿಂದ 12 ದಿವಸಗಳವರೆಗೆ ಗಂಗಾನದಿಯಲ್ಲಿ ಪುಣ್ಯ ಸ್ನಾನಮಾಡುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ.

ಗುರು ತನ್ನ 5ನೇ ವಿಶೇಷ ದೃಷ್ಠಿಯಿಂದ, ವಿದ್ಯೆ, ಜ್ಞಾನ, ಸಂತಾನವನ್ನು ಹಾಗೂ 9ನೇ ವಿಶೇಷ ದೃಷ್ಠಿಯಿಂದ, ಧರ್ಮ ಮತ್ತು ಪಿತೃ ರಕ್ಷಣೆ ಮಾಡುತ್ತಾನೆ. ಅದಕ್ಕಾಗಿಯೇ ಗುರುವಿಗೆ 5ನೇ ಮತ್ತು 9ನೇ ಈ ವಿಶೇಷ ದೃಷ್ಠಿಯಿದೆ. ಗುರು ಹೆಚ್ಚಾಗಿ ವಿದೇಶ ವ್ಯವಹಾರ, ಹಣಕಾಸು ವ್ಯವಹಾರವನ್ನು ಸೂಚಿಸುತ್ತದೆ. ಅಲ್ಲದೆ ಬ್ಯಾಂಕ್‌ಗಳು, ಖಜಾನೆ, ಆದಾಯದ ಮೂಲಗಳು, ಹೇರಳವಾಗಿ ಖರ್ಚುಮಾಡುವುದು, ಸಾಲದ ವ್ಯವಹಾರಗಳು, ಸಾಮಾನ್ಯ ವಹಿವಾಟುಗಳು, ವ್ಯಾಪಾರ, ವಕೀಲರು, ನ್ಯಾಯಾಂಗ, ಮಸೀದಿ, ಚರ್ಚ್, ಧಾರ್ಮಿಕ ಕ್ಷೇತ್ರಗಳು, ಮಠ, ಕ್ರೀಡಾಗಾರರು, ಜೂಜಾಟ, ವಿದ್ಯಾ ಸಂಸ್ಥೆಗಳು, ವಿದೇಶಮಂತ್ರಿಗಳು, ವಿತ್ತ ಮಂತ್ರಿಗಳು, ದೂರಪ್ರಯಾಣ, ಬಂಗಾರವನ್ನು ಸೂಚಿಸುತ್ತದೆ.

ಗೋಚಾರದಲ್ಲಿ ಗುರು ಜನ್ಮರಾಶಿಯಿಂದ 2,5,7,9 ಮತ್ತು 11ನೇ ಮನೆಯಲ್ಲಿ ಬಂದಾಗ ಶುಭಫಲವನ್ನು ನೀಡುತ್ತಾನೆ. ಗುರು ಜನ್ಮರಾಶಿಯಿಂದಾಗಲೀ, ಲಗ್ನದಿಂದಾಗಲಿ 6,8 ಮತ್ತು 12ನೇ ಭಾವದಲ್ಲಿದ್ದರೆ ಗುರುಬಲ ಕಡಿಮೆ ಜನ್ಮರಾಶಿಯಿಂದ 1, 10, 2, 11, 5, 4ನೇ ಭಾವದಲ್ಲಿ ಗುರು ಭಾಗ್ಯ ವೃದ್ದಿಕಾರಕ. ಚಂದ್ರನಿಂದ ಗುರು ಕೇಂದ್ರದಲ್ಲಿ ಅಂದರೆ 1, 4, 7, 10 ನೇ ಭಾವದಲ್ಲಿದ್ದರೆ ಗಜಕೇಸರಿಯೋಗ ಉಂಟಾಗುತ್ತದೆ. ಗುರು ಅಸ್ತವಾಗಿದ್ದಾಗ, ವಕ್ರಿಯಾಗಿದ್ದಾಗ ಶುಭಫಲ ನೀಡುವುದಿಲ್ಲ. ಗುರು ಪುರುಷ ರಾಶಿಯಲ್ಲಿದ್ದಾಗ ಪುತ್ರಸಂತಾನ ನೀಡುತ್ತಾನೆ.

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ- 577 201
ಮೋ:9449048340
ಪೋನ್: 08182-227

Share this Story:

Follow Webdunia kannada