Select Your Language

Notifications

webdunia
webdunia
webdunia
webdunia

ಮಾನವ ಜೀವನವೇ ಪವಿತ್ರ : ಸದ್ಗುರು

ಮಾನವ ಜೀವನವೇ ಪವಿತ್ರ : ಸದ್ಗುರು
, ಸೋಮವಾರ, 17 ಅಕ್ಟೋಬರ್ 2011 (16:03 IST)
WD
ಅಸಮಾಧಾನ, ಕ್ರೋಧ, ದ್ವೇಷ ಇವುಗಳು ನೀವು ಸೇವಿಸುತ್ತಿರುವ ವಿಷಗಳು; ಇದರಿಂದ ಬೇರೆಯವರು ಸಾಯಬೇಕೆಂದು ಅಪೇಕ್ಷಿಸುವಿರಿ, ಆದರೆ ಜೀವನ ಹಾಗೆ ನಡೆಯುವುದಿಲ್ಲ. - ಸದ್ಗುರು.

ನೀವು ಯಾವುದನ್ನೇ ಆಗಲಿ ತೀವ್ರತೆಯಿಂದ ಬೆನ್ನಟ್ಟಿ ಹೋಗಬೇಕಿಲ್ಲ; ಒಂದು ಜೀವವಾಗಿ ನೀವು ಹೆಚ್ಚು ತೀವ್ರವಾಗಬೇಕು. - ಸದ್ಗುರು.

ಭೂಮಿಯ ಮೇಲಿನ ಉಳಿದೆಲ್ಲಾ ಜೀವಿಗಳಿಗೆ ನಾವು ಮಾಡಬಹುದಾದ ಮಹತ್ತಾದ ಉಪಕಾರವೆಂದರೆ ನಮ್ಮ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುವುದು. - ಸದ್ಗುರು.

ಈ ಮಾನವ ವ್ಯವಸ್ಥೆಯು ಕೆಲಸ ಮಾಡುವುದರ ಕಡೆಗೆ, ಸ್ವಲ್ಪ ಗಮನ ಹರಿಸಲು ಇಚ್ಛಿಸಿದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ಪರಮಾನಂದವನ್ನು ಹೊಂದುವ ಸಾಧ್ಯತೆ ಇದೆ. - ಸದ್ಗುರು.

ನಾವು ಯೋಗ ಎಂದು ಹೇಳಿದಾಗ, ಅದು ನಿಮ್ಮ ಶಕ್ತಿ-ಚೈತನ್ಯಗಳು, ಬಲವಂತವಿಲ್ಲದೆ, ನಿಮ್ಮ ಅಯ್ಕೆಯಿಂದ ಕಾರ್ಯನಿರ್ವಹಿಸುವಂತೆ ಮಾಡುವ ಒಂದು ತಂತ್ರಜ್ಞಾನ. - ಸದ್ಗುರು.

ನೀವು ಮಾಡುವ ಕ್ರಿಯೆಯಲ್ಲಿ ಪರಿಪೂರ್ಣವಾಗಿ ನಿಷ್ಠರಾದಾಗ ಮಾತ್ರ, ಈ ಪ್ರಪಂಚದಲ್ಲಿ ಏನಾದರೂ ಮಹತ್ವಪೂರ್ಣವಾದುದನ್ನು ಮಾಡಬಹುದು. - ಸದ್ಗುರು.

ಸಮಸ್ತ ಜೀವಜಂತುಗಳಲ್ಲಿ, ಮಾನವ ಜೀವಿ ಮಾತ್ರ ಭೌತಿಕವಾದುದನ್ನೂ ಮೀರಿದ ಆಯಾಮಗಳನ್ನು ಪರಿಶೋಧಿಸಿ ಅರಿಯಬಲ್ಲ. - ಸದ್ಗುರು.

ಕರುಣೆ, ಶಾಂತತೆ, ಪ್ರೇಮದಿಂದಿರಲು ಯಾವುದೇ ಆಧ್ಯಾತ್ಮಿಕ ಬೋಧನೆಯ ಅಥವಾ ಅಭ್ಯಾಸದ ಅಗತ್ಯವಿಲ್ಲ, ಅದೊಂದು ಸಾಧಾರಣವಾದ ಅರಿವು.- ಸದ್ಗುರು.

ಮಾನವಜೀವಿಯಾದ ನೀವೇ ಒಂದು ಮಹತ್ತರವಾದ ಪವಿತ್ರಗ್ರಂಥ. ಬದುಕಿನಲ್ಲಿ ನೀವು ಅಗತ್ಯವಾಗಿ ತಿಳಿಯಬೇಕಾದುದೆಲ್ಲವನ್ನೂ ಇದರಲ್ಲಿ ಬರೆದಿಡಲಾಗಿದೆ. - ಸದ್ಗುರು.

ಪವಿತ್ರ ಹಾಗೂ ಪಾಪ ಎನ್ನವುದು, ಒಂದೇ ಕೆಲಸವನ್ನು ಎರಡು ವಿಧಾನದಲ್ಲಿ ಮಾಡುವುದಾಗಿದೆ. ಬದುಕಿನ ಪ್ರತಿಯೊಂದು ಅಂಶವನ್ನೂ, ಪ್ರತಿಯೊಂದು ಉಸಿರನ್ನೂ ಪವಿತ್ರಗೊಳಿಸಬಹುದು ಅಥವಾ ಪಾಪಭರಿತವಾಗಿಸಬಹುದು. - ಸದ್ಗುರು.

Share this Story:

Follow Webdunia kannada