ಮಹಾ ಶಿವರಾತ್ರಿ : ಶಿವನ ಶಕ್ತಿಯ ಬಗ್ಗೆ ತಿಳಿಯಲು ಈ ಲೇಖನ ಓದಿ .
, ಶನಿವಾರ, 22 ಫೆಬ್ರವರಿ 2014 (18:42 IST)
-
ಅರುಣಕುಮಾರ ಧುತ್ತರಗಿ ಮಹಾಶಿವರಾತ್ರಿ ಹತ್ತಿರ ಬರುತ್ತಿದೆ , ಈ ಮಹಾ ಶಿವರಾತ್ರಿಯಂದಯ ಶಿವನ ಭಕ್ತರು ಉಪವಾಸ ಮಾಡುತ್ತಾರೆ. ಶಿವನಿಗಾಗಿ ಉಪವಾಸ ಮಾಡುವುದರಿಂದ ಕಲ್ಪವೃಕ್ಷ ಸಿಗುತ್ತದೆ ಎಂದು ನಂಬಲಾಗುತ್ತದೆ. ಶಿವನ ಕೃಪೆಯಿಂದ ಭಕ್ತ ಮಾರ್ಕಂಡೇಯಗೆ ಅಮರತ್ವ ಪ್ರಾಪ್ತ ವಾಗಿತ್ತು ಮತ್ತು ಮಹಾ ಪ್ರಳಯ ನೋಡುವ ಅವಕಾಶ ಕೂಡ ಪ್ರಾಪ್ತವಾಗಿದೆ.
ದೆವತೆಗಳು, ಮನುಷ್ಯರು ಮತ್ತು ರಾಕ್ಷಸರಿಗೂ ಕೂಡ ಶಿವನ ಕೃಪೆಯಾಗಿದೆ. ಶಿವನು ಭಕ್ತರಿಗಾಗಿ ಎನೇಲ್ಲನ್ನು ನೀಡುತ್ತಾನೆ . ರಾಕ್ಷಸರಿಗೂ ಕೂಡ ವರವನ್ನು ನೀಡಿದ ಶಿವನ್ನು ಎಲ್ಲರು ಆರಾಧಿಸುತ್ತಾರೆ. ತನ್ನ ಭಕ್ತ ಎನೂ ಕೇಳುತ್ತಾನೋ, ಅದೆಲ್ಲವನ್ನು ಶಿವನು ನೀಡುತ್ತಾನೆ.
ಬೇಡಿದೆಲ್ಲವನ್ನು ಶಿವನು ನೀಡುತ್ತಾನೆಂದು ಸಿಕ್ಕಿದ್ದೆಲ್ಲ ನೀಡಿದರೆ ಮುಂದೆ ನಿಮಗೇ ಅಪಾಯವಿದೆ. ಒಳ್ಳೆಯದು ಕೇಳಿದರು ನೀಡುತ್ತಾನೆ ಮತ್ತು ಕೆಟ್ಟದ್ದು ಕೇಳಿದರು ನೀಡುತ್ತಾನೆ. ಆದರೆ ಕೆಟ್ಟದ್ದು ಕೇಳಿದರೆ ಇದರಿಂದ ನಮಗೇ ಅಪಾಯ ಜಾಸ್ತಿ.