Select Your Language

Notifications

webdunia
webdunia
webdunia
webdunia

ಕೇರಳ: 180 ಅಡಿ ಗಣೇಶ ವಿಗ್ರಹ ಸ್ಥಾಪನೆಗೆ ಸಿದ್ದತೆ

ಕೇರಳ: 180 ಅಡಿ ಗಣೇಶ ವಿಗ್ರಹ ಸ್ಥಾಪನೆಗೆ ಸಿದ್ದತೆ
, ಬುಧವಾರ, 24 ಸೆಪ್ಟಂಬರ್ 2008 (19:00 IST)
ಕೇರಳದ ತ್ರಿವೆಂಡ್ರಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಬೃಹತ್ ಗಣೇಶ ಮೂರ್ತಿಯನ್ನು ಸ್ಥಾಪಿಸಲು ನಿರ್ಧರಿಸಿದ್ದು ,ಅಲ್ಲಿ 180 ಅಡಿ ಎತ್ತರದ ಗಣೇಶ ಮೂರ್ತಿಯನ್ನು 100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಕೇರಳದಲ್ಲಿರುವ ಶಿವಸೇನೆ 15 ಎಕರೆ ಪ್ರದೇಶದಲ್ಲಿ ಗಣೇಶ ಮೂರ್ತಿಯನ್ನು ಸ್ಥಾಪಿಸಲು ನಿರ್ಧರಿಸಿದೆ. ಗಣೇಶ ಕುಳಿತುಕೊಳ್ಳುವ ಆಸನ ಎರಡು ಎಕರೆ ವಿಸ್ತೀರ್ಣವನ್ನು ಹೊಂದಿದೆ ಎಂದು ಶಿವಸೇನೆಯ ರಾಜ್ಯಾಧ್ಯಕ್ಷ ಎಂ.ಎಸ್. ಭುವನಚಂದ್ರನ್ ವೆಬ್‌ದುನಿಯಾಗೆ ತಿಳಿಸಿದ್ದಾರೆ.

ಗಣೇಶ ವಿಗ್ರಹದ ಕೆತ್ತನೆಯ ಕಾರ್ಯ ಮುಂಬರುವ 2013ರಲ್ಲಿ ಮುಕ್ತಾಯಗೊಳ್ಳಲಿದ್ದು, ಗಣೇಶ ವಿಗ್ರಹ ಸ್ಥಾಪನೆಗೆ ತಮಿಳುನಾಡಿನ ಕನ್ಯಾಕುಮಾರಿ ಬಳಿಯಿರುವ ಕುಮಾರಕೊಯಿಲ್ ಭಕ್ತರು ಭೂಮಿಯನ್ನು ನೀಡುವುದಾಗಿ ಅಹ್ವಾನ ನೀಡಿದ್ದರೂ ಕೇರಳದಲ್ಲಿ ಸ್ಥಾಪಿಸುವುದಾಗಿ ಶಿವಸೇನೆ ಹೇಳಿದೆ.

ದಕ್ಷಿಣ ತ್ರಿವೆಂಡ್ರಂನ ವೆಲ್ಲಾರಾಡಾ ಮತ್ತು ದಕ್ಷಿಣ ಕೊಲ್ಲಂನ ಪರಿಪ್ಪಲ್ಲಿಯಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಈ ಗಣೇಶ ವಿಗ್ರಹ ಜಗತ್ತಿನಲ್ಲಿಯೇ ಬೃಹತ್ ವಿಗ್ರಹವಾಗಿದೆ ಎಂದು ಭುವನಚಂದ್ರನ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ್‌ದಲ್ಲಿರುವ ಗಣೇಶ ವಿಗ್ರಹ 66 ಅಡಿ ಎತ್ತರವಾಗಿದ್ದು 24 ಅಡಿ ಎತ್ತರದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದ್ದು ಒಟ್ಟು ಎತ್ತರ 90 ಅಡಿಯಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಕೇರಳದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಗಣೇಶ ವಿಗ್ರಹ 180 ಅಡಿ ಎತ್ತರವಾಗಿದ್ದು, ವಿಗ್ರಹ ನಿಂತ ಆಕಾರದಲ್ಲಿದ್ದು ಸುತ್ತಲು 32 ಗಣೇಶ ವಿಗ್ರಹಗಳು ವಿವಿಧ ಭಂಗಿಗಳಲ್ಲಿವೆ.

ಗಣೇಶ ಮತ್ತು ಆತನ ವಾಹನ ಇಲಿ ಮತ್ತು ನವಿಲನ್ನು ಹೊತ್ತ ವಿಗ್ರಹಕ್ಕೆ ವರ್ಷದಲ್ಲಿ ಒಂದು ಬಾರಿ ಅಭಿಷೇಕ ಮಹೋತ್ಸವವನ್ನು ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿಯನ್ನು ನಡೆಸಲಾಗುತ್ತದೆ.

ಹತ್ತಿರದಲ್ಲಿರುವ ಗಣೇಶ ಮಂದಿರ ಕೇರಳದ ವಾಸ್ತು ಶೈಲಿಯಲ್ಲಿದ್ದು, ಮಂದಿರದಲ್ಲಿ ಪ್ರತಿನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಭುವನಚಂದ್ರನ್ ವೆಬ್‌ದುನಿಯಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Share this Story:

Follow Webdunia kannada